ಸಂಗ್ರಹ ಚಿತ್ರ 
ವಾಣಿಜ್ಯ

ಭಾರತದಲ್ಲೂ ಯೂರೋ 6 ಇಂಧನ; ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್‌ ಪೆಟ್ರೋಲ್, ಡೀಸೆಲ್ ಲಭ್ಯ

ಇಂದಿನಿಂದ ಭಾರತದಲ್ಲೂ ಯೂರೋ 6 ಮಾನದಂಡದ ಇಂಧನ ಮಾರಾಟ ಅಧಿಕೃತವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್‌ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ.

ನವದೆಹಲಿ: ಇಂದಿನಿಂದ ಭಾರತದಲ್ಲೂ ಯೂರೋ 6 ಮಾನದಂಡದ ಇಂಧನ ಮಾರಾಟ ಅಧಿಕೃತವಾಗಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಇನ್ನು ಮುಂದೆ ಅಲ್ಟ್ರಾ ಕ್ಲೀನ್‌ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ.

ಹೌದು.. ಅಲ್ಟ್ರಾ ಕ್ಲೀನ್‌ ಯೂರೊ-6 ದರ್ಜೆಯ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟವು ಭಾನುವಾರದಿಂದ ಆರಂಭವಾಗಲಿದ್ದು, ಈ ಶುದ್ಧ ಇಂಧನವು ವಾಯು ಮಾಲಿನ್ಯ ತಡೆಗೆ ಸಹಕಾರಿ ಎನ್ನಲಾಗಿದೆ. ಅಂತೆಯೇ ಈ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳು ಯಾವುದೇ ಹೆಚ್ಚುವರಿ  ಶುಲ್ಕಗಳು ಇಲ್ಲದೇ ಸಾಮಾನ್ಯ ಪೆಟ್ರೋಲ್ ದರದಲ್ಲಿ ಲಭ್ಯವಾಗಲಿವೆ ಎಂದು ಸರ್ಕಾರ ಹೇಳಿದೆ. 

ಇಲ್ಲಿಯವರೆಗೂ ಭಾರತದಲ್ಲಿ ಯುರೊ-4 ಪ್ರಮಾಣದ ಇಂಧನದ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಯೂರೋ 6 ಇಂಧನದ ಬಳಕೆಯಿಂದಾಗಿ ದೇಶದ ವಾಯುಮಾಲಿನ್ಯ ಪ್ರಮಾಣದಲ್ಲಿ ಶೇ.10ರಿಂದ 20ರಷ್ಟು ತಗ್ಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಯೂರೊ-6  ದರ್ಜೆಯ ಶುದ್ಧ ಇಂಧನ ಬಳಕೆಗೆ ಮುಂದಾದ ದೇಶದ ಮೊದಲ ನಗರ ಎನ್ನುವ ಹೆಗ್ಗಳಿಕೆಗೆ ದೆಹಲಿ ಪಾತ್ರವಾಗಲಿದೆ. ಅಪಾರ ವಾಯು ಮಾಲಿನ್ಯದಿಂದ ಬಳಲುತ್ತಿರುವ ದೆಹಲಿಯಲ್ಲಿ ಶುದ್ಧ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ದೆಹಲಿ ಮಾತ್ರವಲ್ಲದೇ ನೋಯ್ಡಾ,  ಗಾಜಿಯಾಬಾದ್‌, ಗುರುಗ್ರಾಮ ಮತ್ತು ಫರೀದಾಬಾದ್‌ ಸೇರಿದಂತೆ ರಾಜಧಾನಿ ವಲಯದ ನಗರಗಳಲ್ಲಿ ಈ ಇಂಧನ ಲಭ್ಯವಾಗಲಿದೆ.

ಶುದ್ಧ ಇಂಧನ ತಯಾರಿಕೆಗಾಗಿ ತೈಲ ಕಂಪನಿಗಳು ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದು, ಪ್ರತೀ ಲೀಟರ್ ಶುದ್ಧ ಪೆಟ್ರೋಲ್ ತಯಾರಿಕೆಗೆ ಈಗಿರುವ ದರಕ್ಕಿಂತ 50 ಪೈಸೆಯಿಂದ 1 ರೂಗಳಷ್ಟು ಹೆಚ್ಚು ಹಣ ವೆಚ್ಚವಾಗುತ್ತದೆ. ಇದಾಗ್ಯೂ ತೈಲ ಕಂಪನಿಗಳು ದರ ಏರಿಕೆ ಮಾಡಿಲ್ಲ. ಈ ಕುರಿತು  ಪ್ರತಿಕ್ರಿಯೆ ನೀಡಿರುವ ಐಒಸಿ, 'ಸದ್ಯಕ್ಕೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚುವರಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಪ್ರಸ್ತಾವನೆಗಳು ನಮ್ಮ ಮುಂದಿಲ್ಲ ಎಂದು ಹೇಳಿದೆ.

ದೇಶದಲ್ಲಿರುವ ಎಲ್ಲ 68,700 ಬಂಕ್ ಗಳಲ್ಲಿ ಇಂದಿನಿಂದ ಶುದ್ಧ ಪೆಟ್ರೋಲ್ ದೊರೆಯಲಿದ್ದು, ಪೆಟ್ರೋಲ್, ಡೀಸೆಲ್ ದರದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಇತ್ತೀಚೆಗಷ್ಚೇ ಅಂದರೆ ಮಾರ್ಚ್ 16ರಂದು ಕೇಂದ್ರ ಸರ್ಕಾರ ಇಂಧನ ಮೇಲಿನ ತೆರಿಗೆಯನ್ನು  ಹೆಚ್ಚುಗೊಳಿಸಿದೆ. ಹೀಗಾಗಿ ದರ ಏರಿಕೆ ಮಾಡುವುದರಿಂದ ಮತ್ತೆ ಗ್ರಾಹಕರ ಮೇಲೆ ಒತ್ತಡ ಬೀಳುತ್ತದೆ. ಇದೇ ಕಾರಣಕ್ಕೆ ದರ ಏರಿಕೆ ಮಾಡಿಲ್ಲ ಎಂದು ಐಒಸಿ ನಿರ್ದೇಶಕ ಸಂಜೀವ್ ಸಿಂಗ್ ಹೇಳಿದ್ದಾರೆ. 

ಕೇವಲ ಮೂರೇ ವರ್ಷಗಳಲ್ಲಿ ಬಿಎಸ್ 4 ರಿಂದ ಬಿಎಸ್ 6: ಭಾರತದ ಅಭೂತಪೂರ್ವ ಸಾಧನೆ
ಇನ್ನು ಇಷ್ಟು ದಿನ ಭಾರತ ಬಿಎಸ್ 4 ಪ್ರಮಾಣದ ಇಂಧನವನ್ನು ಬಳಕೆ ಮಾಡುತ್ತಿತ್ತು. ಆದರೆ ಮೂರು ವರ್ಷಗಳ ಹಿಂದಷ್ಟೇ ಬಿಎಸ್ 6 ಪ್ರಮಾಣಕ್ಕೆ ಬದಲಾಗುವ ಕುರಿತು ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರ ಹೊರ ಬಿದ್ದ ಕೇವಲ 3 ವರ್ಷಗಳ ಅವಧಿಯಲ್ಲಿ ನಾವು ಬಿಎಸ್ 6 ಪ್ರಮಾಣದ  ಇಂಧನ ಬಳಕೆ ಮಾಡುತ್ತಿದ್ದೇವೆ. ಇಷ್ಟು ಕಡಿಮೆ ಅವಧಿಯಲ್ಲಿ ಬಿಎಸ್ 6 ಪ್ರಮಾಣದ ಇಂಧನ ಅಳವಡಿಸಿಕೊಂಡ ದೇಶ ಎಂಬ ಕೀರ್ತಿಗೆ ಇದೀಗ ಭಾರತ ಭಾಜನವಾಗಿದೆ. ವಿಶ್ವದ ಯಾವುದೇ ರಾಷ್ಟ್ರ ಇಷ್ಟು ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿಲ್ಲ ಎಂದು ಸಿಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT