ವಾಣಿಜ್ಯ

ಕೋವಿಡ್ ಎಫೆಕ್ಟ್ : ಭವಿಷ್ಯ ನಿಧಿ ಸದಸ್ಯರ ಜನ್ಮ ದಿನಾಂಕ ತಿದ್ದುಪಡಿಗೆ ಪರಿಷ್ಕೃತ ನಿಯಮ

Nagaraja AB

ನವದೆಹಲಿ: ಕೊರೋನಾ ಸೋಂಕಿನ ಕಾರಣ ಆನ್ ಲೈನ್ ಸೇವೆಯನ್ನು ಚುರುಕುಗೊಳಿಸಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸದಸ್ಯರು ತಮ್ಮ ಜನ್ಮ ದಿನಾಂಕಕ್ಕೆ ತಿದ್ದುಪಡಿ ತರಲು ಪರಿಷ್ಕೃತ ನಿಯಮಗಳನ್ನು ರೂಪಿಸಿದೆ

ಈ  ಹೊಸ ವ್ಯವಸ್ಥೆ ಪಿಎಫ್ ಸದಸ್ಯರ ಯುಎಎನ್ ಮೂಲಕ ನಿಮ್ಮ ಗ್ರಾಹಕರನ್ನು ತಿಳಿಯಿರಿ ಕೆವೈಸಿಯನ್ನು ಖಾತ್ರಿಪಡಿಸಲಿದೆ. ಆಧಾರ್ ಸಂಖ್ಯೆಯಲ್ಲಿ ನಮೂದಾಗಿರುವ ಜನ್ಮ ದಿನಾಂಕವನ್ನೇ ಸೂಕ್ತ ಆಧಾರ ಎಂದು ಪರಿಗಣಿಸಲಾಗುವುದು. 

ಆದಾಗ್ಯೂ ಇಪಿಎಫ್ಒ ಮಾಹಿತಿ ಕೋಶದಲ್ಲಿನ ಜನ್ಮ ದಿನಾಂಕಕ್ಕೂ ಆಧಾರ್ ನಲ್ಲಿರುವ ಜನ್ಮ ದಿನಾಂಕಕ್ಕೂ ಮೂರು ವರ್ಷಗಳು ಮೀರದಂತೆ ಅಂತರ ಇದ್ದಲ್ಲಿ ಮಾತ್ರ ಆಧಾರ್ ಅನ್ನು ಪರಿಗಣಿಸುತ್ತದೆ. ಪಿಎಫ್ ಗ್ರಾಹಕರು ತಮ್ಮ ತಿದ್ದುಪಡಿ ಕೋರಿಕೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ

ಯುಐಡಿಎಐ ಆಧಾರ್ ನೊಂದಿಗೆ ಪಿಎಫ್ ಸಂಸ್ಥೆ ಆನ್ ಲೈನ್ ಮೂಲಕವೇ ಜನ್ಮ ದಿನಾಂಕವನ್ನು ಪರಿಶೀಲಿಸಲಿದ್ದು ತಿದ್ದುಪಡಿ ಕೋರಿಕೆಗಳನ್ನು ಶೀಘ್ರವೇ ಇತ್ಯರ್ಥಪಡಿಸಬಹುದಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾನುವಾರ ತಿಳಿಸಿದೆ ಆನ್ ಲೈನ್ ಕೋರಿಕೆಗಳನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ಕೂಡ ಇಪಿಎಫ್ಒ ತನ್ನ ಫೀಲ್ಡ್ ಆಫೀಸರ್ ಗಳಿಗೆ ಸೂಚನೆ ನೀಡಿದೆ.  

ಕೊರೋನಾ ವೈರಾಣು ಸೋಂಕಿನ ಕಾರಣ ಬಹುತೇಕ ಚಟುವಟಿಕೆಗಳು ಸ್ತಬ್ಧವಾಗಿದ್ದು ಪಿಎಫ್ ಗ್ರಾಹಕರ ಹಣಕಾಸು ಮುಗ್ಗಟ್ಟು, ಆನ್ ಲೈನ್ ಮೂಲಕ ಹಣ ಹಿಂಪಡೆಯುವಿಕೆ ಮೊದಲಾದ ಅಗತ್ಯ ಸೇವೆಗಳನ್ನು ಶೀಘ್ರ ಪಡೆಯುವಂತಾಗಲು ಈ ಆನ್ ಲೈನ್ ಸೇವೆ ನೀಡಲಾಗಿದೆ.

SCROLL FOR NEXT