ವಾಣಿಜ್ಯ

ಮಾರ್ಚ್‌ನಲ್ಲಿ ಸಗಟು ದರ ಸೂಚ್ಯಂಕ ಹಣದುಬ್ಬರ ಶೇ 1ಕ್ಕೆ ಇಳಿಕೆ

Sumana Upadhyaya

ನವದೆಹಲಿ: ಆಹಾರ ಮತ್ತು ಆಹಾರೇತರ ವಸ್ತುಗಳ ಬೆಲೆ ಕುಸಿತದಿಂದ ಮಾಸಿಕ ಸಗಟು ದರ ಸೂಚ್ಯಂಕ ಆಧಾರದಡಿ ವಾರ್ಷಿಕ ಹಣದುಬ್ಬರ ಕಳೆದ ಮಾರ್ಚ್‍ನಲ್ಲಿ ಶೇ 1ಕ್ಕೆ ಇಳಿದಿದೆ.

ಈ ಅವಧಿಯ ಹಿಂದಿನ ತಿಂಗಳು ಅಂದರೆ, ಫೆಬ್ರವರಿಯಲ್ಲಿ ಹಣದುಬ್ಬರ ಶೇ 2.26ರಷ್ಟಿದ್ದರೆ, ಕಳೆದ ವರ್ಷದ ಮಾರ್ಚ್‍ ತಿಂಗಳಲ್ಲಿ ಈ ದರ ಶೇ 3.10ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ವರದಿ ತಿಳಿಸಿದೆ . 

ಕೊರೊನಾವೈರಸ್ ಉಲ್ಬಣ ಮತ್ತು ರಾಷ್ಟ್ರವ್ಯಾಪಿ ಘೋಷಿಸಲಾಗಿರುವ ಲಾಕ್‌ಡೌನ್‌ ನಿಂದ ಮೇ ತಿಂಗಳ ಸಗಟು ದರ ಸೂಚ್ಯಂಕದ ಅಂಕಿಅಂಶಗಳನ್ನು ಹೆಚ್ಚಿನ ಸ್ಪಂದನೆ ಇಲ್ಲದೆ ಲೆಕ್ಕಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅಂತಿಮ ತಿಂಗಳ ವರದಿ ಬಿಡುಗಡೆ ವೇಳೆ ಅಂಕಿ-ಅಂಶಗಳನ್ನು ಗಮನಾರ್ಹ ರೀತಿಯಲ್ಲಿ ಪರಿಷ್ಕರಿಸುವ ಸಾಧ್ಯತೆಯಿದೆ ಎಂದು ಸಚಿವಾಲಯ ಹೇಳಿದೆ.

ಪ್ರಾಥಮಿಕ ಪದಾರ್ಥಗಳ ಸೂಚ್ಯಂಕ ಶೇ 2.5 ರಷ್ಟು ಕುಸಿದಿದ್ದರೆ, ಮೊಟ್ಟೆ, ಕೋಳಿ ಮಾಂಸ, ಚಹಾ, ಸಮುದ್ರ ಮೀನು, ಮೆಕ್ಕೆಜೋಳ, ಹಣ್ಣು-ಹಂಪಲು ಮತ್ತು ತರಕಾರಿಗಳ ಬೆಲೆ ಕುಸಿತದಿಂದ ಆಹಾರ ಪದಾರ್ಥಗಳ ಸೂಚ್ಯಂಕ ಶೇ 2.1 ರಷ್ಟು ಇಳಿಕೆಯಾಗಿದೆ.

ಪ್ರಾಥಮಿಕ ಪದಾರ್ಥಗಳ ಗುಂಪಿನ ಆಹಾರ ಪದಾರ್ಥಗಳು ಮತ್ತು ಉತ್ಪಾದಕ ವಸ್ತುಗಳ ಗುಂಪಿನ ಆಹಾರ ಪದಾರ್ಥಗಳ ಸಗಟು ದರ ಸೂಚ್ಯಂಕ ಆಧಾರದ ಹಣದುಬ್ಬರ ಕಳೆದ ಮಾರ್ಚ್‍ ನಲ್ಲಿ ಶೇ 5.49ಕ್ಕೆ ಇಳಿದಿದೆ. ಈ ಅವಧಿಯ ಹಿಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಈ ದರ ಶೇ 7.31ರಷ್ಟಿತ್ತು.

SCROLL FOR NEXT