ವಾಣಿಜ್ಯ

ಕೋವಿಡ್-19: ಗೂಗಲ್ ನಲ್ಲಿ ಹೊಸ ನೇಮಕಾತಿಗಳಿಗೆ 1 ವರ್ಷ ತಡೆ: ಆಯಕಟ್ಟಿನ ಕ್ಷೇತ್ರಗಳಲ್ಲಿ ಹೂಡಿಕೆ! 

Srinivas Rao BV

ಸ್ಯಾನ್ ಫ್ರಾನ್ಸಿಸ್ಕೊ: 2019 ರಲ್ಲಿ 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆ ಈ ವರ್ಷ ಅಷ್ಟೇ ಸಂಖ್ಯೆಯ ನೇಮಕಾತಿಗೆ ಯೋಜನೆ ರೂಪಿಸಿತ್ತು. ಆದರೆ ಕೊರೋನಾ ಪರಿಣಾಮ ಬರೊಬ್ಬರಿ ಒಂದು ವರ್ಷಗಳ ಕಾಲ ಹೊಸ ನೇಮಕಾತಿಗಳಿಗೆ ಗೂಗಲ್ ಬ್ರೇಕ್ ಹಾಕಿದೆ.  

ಹೊಸ ನೇಮಕಾತಿಗಳ ಬದಲಾಗಿ  ಡಾಟಾ ಕೇಂದ್ರಗಳು, ಮಾರುಕಟ್ಟೆ ಮುಂತಾದ ಆಯಕಟ್ಟಿನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಗೂಗಲ್ ನಿರ್ಧರಿಸಿದೆ. "ಹೊಸ ನೇಮಕಾತಿಗಳನ್ನು ಕಡಿಮೆ ಮಾಡುತ್ತೇವೆ. ಆದರೆ ಆಯಕಟ್ಟಿನ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸುತ್ತೇವೆ ಎಂದು ಗೂಗಲ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.  

ಗ್ರಾಹಕರು ಹಾಗೂ ಉದ್ಯಮಗಳು ಗೂಗಲ್ ಮೇಲೆ ಅವಲಂಬಿತವಾಗಿರುವ ಕ್ಷೇತ್ರಗಳತ್ತ ಗಮನ ಹರಿಸುತ್ತೇವೆ ಎಂದು ಸುಂದರ್ ಪಿಚ್ಚೈ ಹೇಳಿದ್ದಾರೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (ಎಸ್ಎಂಬಿಎಸ್) ಆರೋಗ್ಯ ಸಂಸ್ಥೆಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ 800 ಮಿಲಿಯನ್ ನೆರವು ನೀಡುವುದಾಗಿ ಕಳೆದ ತಿಂಗಳು ಸುಂದರ್ ಪಿಚ್ಚೈ ಘೋಷಿಸಿದ್ದರು. 

SCROLL FOR NEXT