ಏರ್‌ಏಷ್ಯಾ 
ವಾಣಿಜ್ಯ

ಲಾಕ್‌ಡೌನ್ ಎಫೆಕ್ಟ್: ಏರ್‌ಏಷ್ಯಾ ಸಿಬ್ಬಂದಿ ವೇತನದಲ್ಲಿ ಶೇ. 20ರಷ್ಟು ಕಡಿತ

ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದು ಸಂಸ್ಥೆಗೆ ಸಾಕಷ್ಟು ನಷ್ಟವಾಗಿರುವ ಕಾರಣ  ಏರ್‌ಏಷ್ಯಾ ಇಂಡಿಯಾ ತನ್ನ ಸಿಬ್ಬಂದಿಯ ಏಪ್ರಿಲ್ ವೇತನದಲ್ಲಿ ಶೇ.  20 ರಷ್ಟು ಕಡಿತಗೊಳಿಸಿದೆ ಎಂದು ಮೂಲವೊಂದು ತಿಳಿಸಿದೆ 

ಮುಂಬೈ: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದು ಸಂಸ್ಥೆಗೆ ಸಾಕಷ್ಟು ನಷ್ಟವಾಗಿರುವ ಕಾರಣ  ಏರ್‌ಏಷ್ಯಾ ಇಂಡಿಯಾ ತನ್ನ ಸಿಬ್ಬಂದಿಯ ಏಪ್ರಿಲ್ ವೇತನದಲ್ಲಿ ಶೇ.  20 ರಷ್ಟು ಕಡಿತಗೊಳಿಸಿದೆ ಎಂದು ಮೂಲವೊಂದು ತಿಳಿಸಿದೆ 

ಆದರೆ ತಿಂಗಳಿಗೆ 50,000 ರೂ ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ಇದು ಅನ್ವಯವಾಗುವುದಿಲ್ಲ. ಬೆಂಗಳುರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆ ಬೇರೆಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳ ಮಾದರಿಯನ್ನೇ ಅನುಸರಿಸಿದೆ.ದೇಶದ ಇತರೆ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಸ್ಪೈಸ್ ಜೆಟ್ ಮತ್ತು ವಿಸ್ತಾರ ಸಹ ತಮ್ಮ ಸಿಬ್ಬಂದಿಯ ವೇತನಗಳಲ್ಲಿ ಕೆಲ ಮಟ್ಟಿನ ಕಡಿತ ಮಾಡಿದೆ.

"ಉನ್ನತ  ಆಡಳಿತವು ಶೇಕಡಾ 20 ರಷ್ಟು ವೇತನ ಕಡಿತ ನಿರ್ಧಾರ ತೆಗೆದುಕೊಳ್ಳುತ್ತದೆ.ಇತರ ವಿಭಾಗಗಳಲ್ಲಿ ಬರುವ ಅಧಿಕಾರಿಗಳ ವೇತನವನ್ನು ಕ್ರಮವಾಗಿ ಶೇಕಡಾ 17, 13 ಮತ್ತು 7 ರಷ್ಟು ಕಡಿಮೆ ಮಾಡಲಾಗಿದೆ" ಎಂದು ತಮ್ಮ ಹೆಸರು ಬಹಿರಂಗಪಡಿಸದಾಧಿಕಾರಿಯೊಬ್ಬರು  ಪಿಟಿಐಗೆ ತಿಳಿಸಿದರು.

ಆದರೆ, ತಿಂಗಳಿಗೆ 50,000 ರೂ ಅಥವಾ ಅದಕ್ಕಿಂತ ಕಡಿಮೆ ಆದಾಯ ಗಳಿಸುವ ನೌಕರರಿಗೆ ಈಗಿನವರೆಗೆ ಯಾವುದೇ ವೇತನ ಕಡಿತ ಮಾಡಲಾಗಿಲ್ಲ.ಈ ಸಂಬಂಧ  ಏರ್ ಏಷ್ಯಾ ಇಂಡಿಯಾ ವಕ್ತಾರರನ್ನು ಸಂಪರ್ಕಿಸಿದಾಗ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT