ಮೋಹನ್‌ದಾಸ್ ಪೈ 
ವಾಣಿಜ್ಯ

ಕೊರೋನಾ ಎಫೆಕ್ಟ್: ಈ ವರ್ಷ ಐಟಿ ವಲಯದಲ್ಲಿ ನೇಮಕಾತಿ ಬಹುತೇಕ ರದ್ದು- ಮೋಹನ್‌ದಾಸ್ ಪೈ

ಭಾರತದ ಮಾಹಿತಿ ತಂತ್ರಜ್ಞಾನ ಸೇವಾ ಉದ್ಯಮ ವಲಯದಲ್ಲಿ ಈ ವರ್ಷ ಯಾವುದೇ ನೇಮಕಾತಿ ನಡೆಯುವುದಿಲ್ಲ ಎಂದು ಐಟಿ ಉದ್ಯಮದ ಹಿರಿಯರಲ್ಲಿ ಒಬ್ಬರಾದ ಟಿ ವಿ ಮೋಹನ್‌ದಾಸ್ ಪೈ ಹೇಳಿದ್ದಾರೆ.

ಬೆಂಗಳೂರು: ಭಾರತದ ಮಾಹಿತಿ ತಂತ್ರಜ್ಞಾನ ಸೇವಾ ಉದ್ಯಮ ವಲಯದಲ್ಲಿ ಈ ವರ್ಷ ಯಾವುದೇ ನೇಮಕಾತಿ ನಡೆಯುವುದಿಲ್ಲ ಎಂದು ಐಟಿ ಉದ್ಯಮದ ಹಿರಿಯರಲ್ಲಿ ಒಬ್ಬರಾದ ಟಿ ವಿ ಮೋಹನ್‌ದಾಸ್ ಪೈ ಹೇಳಿದ್ದಾರೆ. ಕೊರೋನಾವೈರಸ್ ಹಾವಳಿಯ ಕಾರಣ ಉದ್ಯಮದ ಉನ್ನತ ಮಟ್ಟದ ಸಿಬ್ಬಂದಿ ಶೇಕಡಾ 20-25ರಷ್ಟು ವೇತನ ಕಡಿತವನ್ನು ಕಾಣಲಿದ್ದಾರೆ ಎಂದು ಅವರು ಇದೇ ವೇಳೆ ಬಹಿರಂಗಪಡಿಸಿದಾರೆ.

ಇನ್ಫೋಸಿಸ್ ಲಿಮಿಟೆಡ್ ನ ಐಟಿ ಸೇವೆಗಳ ಪ್ರಮುಖ ಮುಖ್ಯ ಹಣಕಾಸು ಅಧಿಕಾರಿ ಐಟಿ ಉದ್ಯಮವು ತನ್ನ ಶೇಕಡಾ 90 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡುವಂತೆ ಹೇಳಿದ್ದು "ಅಚ್ಚರಿಯ ಕೆಲಸ ನಡೆದಿದೆ" ಎಂದಿದ್ದಾರೆ. ಮನೆಯಲ್ಲಿ ಮೂಲಸೌಕರ್ಯ ಸ್ಥಾಪನೆ ಮೂಲಕ ತಮ್ಮ ಗ್ರಾಹಕರಿಂದ ಪರ್ಮಿಷನ್ ಗಳನ್ನು ಪಡೆಯುವ ಮೂಲಕ  "ಭದ್ರತೆ ಮತ್ತು ಮೇಲ್ವಿಚಾರ" ಉತ್ತಮವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಈ ಉಪಕ್ರಮ ತೆಗೆದುಕೊಂಡಿದೆ.ಆರಿನ್ ಕ್ಯಾಪಿಟಲ್ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಶನ್‌ ಸಂಸ್ಥೆಯ  ಅಧ್ಯಕ್ಷರು, ಹೇಳಿದಂತೆ ಕೊರೋನಾವೈರಸ್ ನಿಂದ ಉಂಟಾದ ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ ಮತ್ತು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ ನಂತರವೂ ಐಟಿ ಕಂಪನಿಗಳ ಉದ್ಯೋಗಿಗಳು ಯಾವಾಗಲೂ ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಈ ರೀತಿ ಮನೆಯಿಂಡ ಕೆಲಸ ಮಾಡುವವರ ಪ್ರಮಾಣ ಶೇಕಡಾ 25 ರಿಂದ 30ರಷ್ಟು ಆಗಿರಲಿದೆ ಎಂದು ಹೇಳೀದ್ದಾರೆ.

ಐಟಿ ವಲಯದಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಕಂಪನಿಗಳು ಈಗ ತಮ್ಮ ಇಕ್ಕಟ್ಟಾದ ಕಚೇರಿ ಜಾಗದಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಬೇಕಿದೆ ಎಂದು ಪೈ ಪಿಟಿಐಗೆ ಹೇಳೀದ್ದಾರೆ.

"ಈಗ ಸಾಮಾಜಿಕ ಅಂತರ ಅಗತ್ಯವಾಗಿರುವ ಕಾರಣ ಒಬ್ಬ ವ್ಯಕ್ತಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗಲಿದೆ. ಮನೆಯಿಂದ ಶೇಕಡಾ 25 ರಷ್ಟು ಮಂದಿ ಕೆಲಸ ಮಾಡುವುದರಿಂದ ಹೆಚ್ಚುವರಿ ಸ್ಥಳ ದೊರೆಯಲಿದೆ. ಜನರಿಗೆ ಕಚೇರಿಗಳಲ್ಲಿ ಸ್ಥಳ ಹೆಚ್ಚು ಹೆಚ್ಚಾಗಿ ಸಿಗಲಿದೆ.ಹಾಗಾಗಿ ಮುಂದಿನ ಒಂದು ವರ್ಷದವರೆಗೆ ಮಾರುಕಟ್ಟೆ (ಕಚೇರಿ ಸ್ಥಳ ವಿಭಾಗ) ಬಹಳಷ್ಟು ಕಡಿಮೆ ಬೇಡಿಕೆಯನ್ನು ಹೊಂದಿರಲಿದೆ. ಆ ನಂತರ ಅದು ಸಾಮಾನ್ಯ ವೇಗದಲ್ಲಿ ಬೆಳೆಯುತ್ತದೆ "ಎಂದು ಅವರು ಹೇಳಿದರು.

ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಬಗ್ಗೆ ಆತಂಕ ವ್ಯಕತಪಡಿಸಿದ ಪೈ, ಹೆಚ್ಚಿನ ಐಟಿ ಕಂಪನಿಗಳು ಈ ವರ್ಷ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ.  ಈಗಾಗಲೇ ನೇಮಕ ಮಾಡಿಕೊಂಡ ನೌಕರರ ಬದ್ದತೆಯನ್ನು ಪೂರೈಸಲಾಗುತ್ತದೆ. ಹೊರತಾಗಿ ಹೊಸ ನೇಮಕಾತಿಗಳು ರದ್ದಾಗಲಿದೆ ಎಂದರು. "ಎರಡನೆಯದಾಗಿ ಯಾವುದೇ ಕಾರಣಕ್ಕೆ ನೌಕರರು ಕೆಲಸ ತೊರೆದರೆ ಸಂಸ್ಥೆ ರು ಬ್ಯಾಕ್‌ಲಾಗ್ ಅನ್ನು ಭರ್ತಿ ಮಾಡುತ್ತದೆ ಎಂದು ನಾನು ಭಾವಿಸಲಾರೆ. ಏಕೆಂದರೆ ಈ ತ್ರೈಮಾಸಿಕ ಮತ್ತು ಮುಂದಿನ ತ್ರೈಮಾಸಿಕದಲ್ಲಿ ಮಾರುಕಟ್ಟೆ ಅಷ್ಟೇನೂ ಏರ್ಕೆಯಲ್ಲಿರುವುದಿಲ್ಲ.ಐಟಿ ಗ್ರಾಹಕರೆಲ್ಲಾ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿದ್ದಾರೆ.ಅವರು ಇನ್ನೂ ತಮ್ಮ ಕಚೇರಿಗಳನ್ನು ತೆರೆದಿಲ್ಲ, ಅವರು ಇನ್ನೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ, ಮುಂದಿನ ವರ್ಷವಷ್ಟೇ ನೇಮಕಾತಿಗಳು ನಡೆಯುತ್ತದೆ.

ವೇತನ ಕಡಿತ ಇರುತ್ತದೆ, ಆದರೆ ಹೆಚ್ಚಿನವರಿಗೆ ವೇತನ ಹೆಚ್ಚಳವಾಗುವುದಿಲ್ಲ. ವೆಚ್ಚವನ್ನು ಸರಿಹೊಂದಿಸಲು ಉನ್ನತ ಮಟ್ಟದವರ ಸಂಬಳವನ್ನು ಕಡಿತಗೊಳಿಸುತ್ತಾರೆ. ಯಾರು ತಿಂಗಳಿಗೆ 75,000 ರಿಂದ ಒಂದು ಲಕ್ಷ ರೂ. ಪಡೆಯುತ್ತಾರೆಯೋ ಅವರು ವೇತನ ಕಡಿತವನ್ನು ನೋಡಲಿದ್ದಾರೆ. ಅವರ ವೇತನ ಕಡಿತ ಪ್ರಮಾಣ ಶೇಕಡಾ 20-25 ಆಗಿರಲಿದೆ. ಆದರೆ ಅದಕ್ಕಿಂತ ಕಡಿಮೆ ವೇತನವನ್ನು ಪಡೆಯುವವರಿಗೆ ವೇತನ ಕಡಿತ ಆಗುವುದಿಲ್ಲ ಎಂದು ಪೈ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT