ವಾಣಿಜ್ಯ

ತ್ರೈಮಾಸಿಕ ವರದಿ: ವೊಡಾಫೋನ್ ಐಡಿಯಾಗೆ 25,460 ಕೋಟಿ ನಷ್ಟ

Raghavendra Adiga

ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಗುರುವಾರ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.

ವೊಡಾಫೋನ್ ಐಡಿಯಾದ ನಷ್ಟವು ಹಿಂದಿನ ವರ್ಷದ ಈ ಅವಧಿಯಲ್ಲಿ ಸುಮಾರು 4,874 ಕೋಟಿ ರೂ ಆಗಿತ್ತು. ಇನ್ನು ಹಣಕಾಸು ವರ್ಷ2021 ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ  10,659.3 ಕೋಟಿ ರೂ.ಗೆ ತಲುಪಿದ್ದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 11,269.9 ಕೋಟಿ ರೂ. ಆಗಿತ್ತು.

ಅಡ್ಜೆಸ್ಟೆಡ್ ಗ್ರಾಸ್ ರೆವಿನ್ಯೂ  (ಎಜಿಆರ್) ಜೂನ್ ತ್ರೈಮಾಸಿಕದಲ್ಲಿ ಹೆಚ್ಚುವರಿ ಶುಲ್ಕ 19,440.5 ಕೋಟಿ ರೂ. ಒಳಗೊಂಡಿದೆ. ವಿವೇಕದಿಂದ, ಒಟ್ಟು ಅಂದಾಜು ಎಜಿಆರ್ 194.4 ಬಿಲಿಯನ್ ರೂ.ಗಳ ಬಾಕಿ ಶುಲ್ಕವನ್ನು ಗುರುತಿಸಿದ್ದೇವೆ.  ಜೊತೆಗೆ ಮಾರ್ಚ್ 31, 2020 ರ ವೇಳೆಗೆ 460.0 ಬಿಲಿಯನ್ ರೂ.ಗಳ ಬಾಕಿ ಹೊಣೆಗಾರಿಜೆ ಇದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ .

ಕೊರೋನಾ ಕಾರಣದಿಂದಾಗಿ  ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಮೊದಲ ತ್ರೈಮಾಸಿಕ ಆದಾಯ ಪ್ರಭಾವಿತವಾಗಿದೆ ಎಂದು ಕಂಪನಿ ತಿಳಿಸಿದೆ.

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂಗಡಿಗಳ ಲಾಕ್ ಡೌನ್ ಆಗಿ  ರೀಚಾರ್ಜ್‌ಗಳ ಲಭ್ಯತೆ ಕಡಿಮೆಯಾಗಿತ್ತು. ಆರ್ಥಿಕ ಕುಸಿತದ ಕಾರಣದಿಂದಾಗಿ ಗ್ರಾಹಕರ  ರೀಚಾರ್ಜ್ ಮಾಡುವ ಸಾಮರ್ಥ್ಯದ ಮೇಲೆ ಸಹ ಪರಿಣಾಮ ಬೀರಿತ್ತು ಎಂದು ವೊಡಾಫೋನ್ ಐಡಿಯಾದ ಎಂಡಿ ಮತ್ತು ಸಿಇಒ ರವೀಂದರ್ ಟಕ್ಕರ್ ಹೇಳಿದ್ದಾರೆ. 

SCROLL FOR NEXT