ವಾಣಿಜ್ಯ

ಟಿಕ್ ಟಾಕ್ ನೊಂದಿಗೆ ಕೈ ಜೋಡಿಸುವ ಬಗ್ಗೆ ಮಾತುಕತೆ ನಡೆಸಿದ್ದ ಟ್ವಿಟರ್ 

Srinivas Rao BV

ಸ್ಯಾನ್ ಫ್ರಾನ್ಸಿಸ್ಕೋ: ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ನಿಷೇಧದ ಭೀತಿ ಎದುರಿಸುತ್ತಿರುವ ಟಿಕ್ ಟಾಕ್ ನೊಂದಿಗೆ ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಕೈ ಜೋಡಿಸುವ ಮಾತನ್ನಾಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. 

ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ಟಿಕ್ ಟಾಕ್ ನೊಂದಿಗೆ ಕೈ ಜೋಡಿಸುವುದರ ಬಗ್ಗೆ ಟ್ವಿಟರ್ ಐಎನ್ ಸಿ ಪ್ರಾಥಮಿಕ ಹಂತದ ಮಾತುಕತೆಗಳನ್ನು ಮುಗಿಸಿತ್ತು ಎಂದು ಹೇಳಿದೆ. ಟ್ವಿಟರ್ ಈ ಮಾತುಕತೆಯನ್ನು ಮುಂದುವರೆಸುತ್ತದೆಯೋ ಇಲ್ಲವೋ ಎಂಬುದು ಅಸ್ಪಷ್ಟವಾಗಿದೆ.

ಟಿಕ್ ಟಾಕ್ ಬಗ್ಗೆ ಜಾಗತಿಕವಾಗಿ ಮೂಡಿರುವ ಅಭಿಪ್ರಾಯಗಳು ಹಾಗೂ ನಿಷೇಧದ ಭೀತಿ  ಮಾತುಕತೆ ನಡೆಸುವುದಕ್ಕೆ ಅಡ್ಡಿಯಾಗಿ ಪರಿಣಮಿಸಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಟ್ವಿಟರ್ ನಿರಾಕರಿಸಿದೆ. 

SCROLL FOR NEXT