ವಾಣಿಜ್ಯ

ಬೆಂಗಳೂರಿನಲ್ಲಿ ಆನ್ ಲೈನ್ ನಲ್ಲಿ ಔಷಧಿ ಪೂರೈಕೆ ಸೇವೆ ಆರಂಭಿಸಿದ ಅಮೆಜಾನ್ 

Sumana Upadhyaya

ಇ-ಕಾಮರ್ಸ್ ಕಂಪೆನಿ ಅಮೆಜಾನ್ ಭಾರತದಲ್ಲಿ ಆನ್ ಲೈನ್ ಔಷಧ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಅಮೆಜಾನ್ ಫಾರ್ಮಸಿಯನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೆ ಸಹ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಅಮೆಜಾನ್ ಆರೋಗ್ಯ ವಲಯದಲ್ಲಿ ಲಭ್ಯವಿದ್ದ ಪ್ರಿಸ್ಕ್ರಿಪ್ಷನ್ ಅಲ್ಲದ, ಸಾಂಪ್ರದಾಯಿಕ ಆಯುರ್ವೇದ / ಯುನಾನಿ ಔಷಧಗಳ ಜೊತೆಗೆ ಆನ್ ಲೈನ್ ನಲ್ಲಿ ಇನ್ನು ಮುಂದೆ ಪ್ರಿಸ್ಕ್ರಿಪ್ಷನ್ ಔಷಧಗಳನ್ನು ಮಾರಾಟ ಮಾಡುತ್ತದೆ.

ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ನಾವು ಅಮೆಜಾನ್ ಫಾರ್ಮಸಿಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿದ್ದು ಪ್ರಿಸ್ಕ್ರಿಪ್ಷನ್ ಆಧಾರದ ಔಷಧಿಗಳನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಬಹುದು. ಗ್ರಾಹಕರು ಮನೆಯಲ್ಲಿಯೇ ಸುರಕ್ಷಿತವಾಗಿ ಕುಳಿತು ತಮಗೆ ಬೇಕಾದ ಔಷಧಿಗಳನ್ನು ತರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.

ಅಮೆಜಾನ್ ಫಾರ್ಮಸಿ ಈಗಾಗಲೇ ಅಮೆರಿಕ, ಇಂಗ್ಲೆಂಡ್, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಕೂಡ ಇ-ಫಾರ್ಮ ಮಾರುಕಟ್ಟೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. 

SCROLL FOR NEXT