ವಾಣಿಜ್ಯ

ಪ್ರಸಕ್ತ ಹಣಕಾಸು ವರ್ಷದಲ್ಲಿ 1.85 ಲಕ್ಷ ಕೋಟಿ ರೂ. ಬ್ಯಾಂಕ್ ವಂಚನೆ:ಆರ್ ಬಿಐ

Sumana Upadhyaya

ನವದೆಹಲಿ: ಕೋವಿಡ್-19ನಿಂದಾಗಿ ಆರ್ಥಿಕತೆ ಕುಸಿತ ಕಂಡು ಬರುತ್ತಿರುವುದರ ಮಧ್ಯೆಯೇ ಬ್ಯಾಂಕ್ ವಂಚನೆ ಪ್ರಕರಣ ಕೂಡ ಹೆಚ್ಚಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆತಂಕ ಉಂಟುಮಾಡುವ ವರದಿ ನೀಡಿದೆ.

ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣದ ಸುಮಾರು 8 ಸಾವಿರದ 707 ವಂಚನೆ ಪ್ರಕರಣಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ವರದಿಯಾಗಿದೆ ಎಂದು ಆರ್ ಬಿಐ ವಾರ್ಷಿಕ ವರದಿ ಹೇಳಿದೆ. ಮೌಲ್ಯದ ವಿಚಾರ ಬಂದಾಗ ಅದು 1.85 ಲಕ್ಷ ಕೋಟಿಯಾಗುತ್ತದೆ, ಅಂದರೆ ಕಳೆದ ವರ್ಷಕ್ಕಿಂತ ಶೇಕಡಾ 159ರಷ್ಟು ಹೆಚ್ಚಾಗಿದೆ.

ಸಾರ್ವಜನಿಕ ವಲಯ ಬ್ಯಾಂಕ್ ಗಳಲ್ಲಿ ಶೇಕಡಾ 98ರಷ್ಟು ವಂಚನೆ ಪ್ರಕರಣಗಳು ನಡೆದಿದ್ದು ನಂತರ ಖಾಸಗಿ ವಲಯ ಬ್ಯಾಂಕುಗಳಲ್ಲಿ ಶೇಕಡಾ 18.4ರಷ್ಟಾಗಿವೆ. ಸಾಲಗಳಲ್ಲಿ ಶೇಕಡಾ 98.1ರಷ್ಟು ಅಂದರೆ ಒಟ್ಟು ವಂಚನೆ 1.82 ಲಕ್ಷ ಕೋಟಿ ರೂಪಾಯಿ, ನಂತರ ಕ್ರೆಡಿಟ್, ಡೆಬಿಟ್ ಕಾರ್ಡುಗಳಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಪ್ರತಿವರ್ಷ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುತ್ತದೆ. ವರ್ಷದ ಹಿಂದೆ 71 ಕೋಟಿ(1,866 ಕೇಸುಗಳು) ವರದಿಯಾಗಿವೆ ಎಂದು ಆರ್ ಬಿಐ ಅಂಕಿಅಂಶ ಹೇಳುತ್ತದೆ.

ವಂಚನೆಯ ಸರಾಸರಿ ಸಮಯ 10 ಕೋಟಿ ರೂಪಾಯಿಗೂ ಅಧಿಕ 63 ತಿಂಗಳಲ್ಲಿ ವರದಿಯಾಗಿದೆ. ಕಳೆದ ವರ್ಷ ಜೂನ್ ನಿಂದ ಈ ವರ್ಷ ಜೂನ್ ವರೆಗೆ ಜಾರಿ ನಿರ್ದೇಶನಾಲಯ ಸಾರ್ವಜನಿಕ ವಲಯ ಬ್ಯಾಂಕ್ ಗಳ ಮೇಲೆ 38.35 ಕೋಟಿ ರೂಪಾಯಿ ಮತ್ತು ಖಾಸಗಿ ವಲಯ ಬ್ಯಾಂಕುಗಳ ಮೇಲೆ 8.55 ಕೋಟಿ ರೂಪಾಯಿ ದಂಡವನ್ನು ವಂಚನೆಯನ್ನು ಬೆಳಕಿಗೆ ತಾರದ್ದಕ್ಕಾಗಿ ಮತ್ತು ಇತರ ಕಾರಣಗಳಿಗೆ ಹೇರಿದೆ.

SCROLL FOR NEXT