ವಾಣಿಜ್ಯ

13 ದಿನಗಳಲ್ಲಿ, 11 ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ, ವಾಹನ ಸವಾರರಿಗೆ ತಪ್ಪದ ಬರೆ

Vishwanath S

ನವದೆಹಲಿ: ಜೂನ್-ಜುಲೈ ತಿಂಗಳಲ್ಲಿ ನಿರಂತರವಾಗಿ ಇಂಧನದ ಬೆಲೆ ಹೆಚ್ಚಿಸಿದ ತೈಲ ಕಂನಿಗಳು ಮತ್ತೆ ಅದೇ ಚಾಳಿ ಮುಂದುವರೆಸಿ, ಕಳೆದ 13 ದಿನಗಳಲ್ಲಿ 11 ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಿದೆ.

ಆಗಸ್ಟ್ 16ರಿಂದ ಪೆಟ್ರೋಲ್ ಬೆಲೆ ಏರಿಕೆ ಆರಂಭವಾಗಿದೆ. ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ, ಆಗಸ್ಟ್ 17ರಂದು 16 ಪೈಸೆ, ಆಗಸ್ಟ್ 18ರಂದು 17 ಪೈಸೆ ಏರಿಸಲಾಯಿತು. ಆಗಸ್ಟ್ 19ರಂದು ಯಾವುದೇ ರೀತಿಯ ಬೆಲೆ ಏರಿಕೆ ಆಗಿರಲಿಲ್ಲ. ಮತ್ತೆ ಆಗಸ್ಟ್ 20ರಿಂದ ಬೆಲೆ ಏರಿಕೆ ಆರಂಭವಾಗುತ್ತಲೆ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 46 ಡಾಲರ್ ನಷ್ಟಿದೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 10 ಪೈಸೆ ಹೆಚ್ಚಳವಾಗಿದೆ. ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಲೀಟರ್ ಗೆ 9 ಪೈಸೆ ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದರೂ ಕೊರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ರಾಜಕೀಯ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದಾವುದನ್ನು ಪರಿಗಣಿಸದ ಕೇಂದ್ರ ಪೆಟ್ರೊಲ್ ಬೆಲೆಯನ್ನು ಹೆಚ್ಚಳ ಮಾಡಿ ಜನರಿಗೆ ನಿತ್ಯ ಬರೆ ಹಾಕುತ್ತಿದೆ.

SCROLL FOR NEXT