ಚಿನ್ನದ ದರದಲ್ಲಿ ಭಾರಿ ಏರಿಕೆ, 10 ಗ್ರಾಮ್ ಬೆಳ್ಳಿಯ ರೇಟ್ ಎಷ್ಟು ಗೊತ್ತೇ?
ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ.
ನವದೆಹಲಿ: ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ.
ಚಿನ್ನದ ಈ ಹಿಂದಿನ ದರ 10 ಗ್ರಾಮ್ ಗೆ 48,614 ರೂಪಾಯಿಗಳಷ್ಟಿತ್ತು. ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 816 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ ಎಂದು ಹೆಚ್ ಡಿಎಫ್ ಸಿ ಸೆಕ್ಯುರಿಟೀಸ್ ನ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಹಸಿರು ಬಣ್ಣದಲ್ಲಿದ್ದು, ಔನ್ಸ್ ಗೆ 1,864 ಯುಎಸ್ ಡಾಲರ್ಸ್ ನಷ್ಟಿದ್ದರೆ, ಬೆಳ್ಳಿಯ ದರ ಪ್ರತಿ ಔನ್ಸ್ ಗೆ 24.52 ಯುಎಸ್ ಡಾಲರ್ಸ್ ನಷ್ಟಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.