ವಾಣಿಜ್ಯ

ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ: ಕೇಂದ್ರ ಸಚಿವ ನಿತಿನ್ ಗಡ್ಕರಿ

Vishwanath S

ನವದೆಹಲಿ: 2021ರ ಜನವರಿ 1ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗಲು ಫಾಸ್ಟ್‌ಟ್ಯಾಗ್‌ಗಳನ್ನು 2016ರಲ್ಲಿ ಪರಿಚಯಿಸಲಾಯಿತು. ಟ್ಯಾಗ್‌ಗಳನ್ನು ಕಡ್ಡಾಯಗೊಳಿಸುವುದರಿಂದ ಶುಲ್ಕ ಪಾವತಿಯನ್ನು ವಿದ್ಯುನ್ಮಾನವಾಗಿ ಮಾಡಲಾಗುವುದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚು ನಿಲ್ಲುವುದು ತಪ್ಪುತ್ತದೆ. 

ಹೊಸ ವರ್ಷದಿಂದ ದೇಶದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಚುವಲ್ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಫಾಸ್ಟ್ಯಾಗ್ ಉಪಯುಕ್ತವಾಗಲಿದೆ ಏಕೆಂದರೆ ನಗದು ಪಾವತಿಗಾಗಿ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ನಿಲ್ಲಬೇಕಾಗಿಲ್ಲ. ಇದಲ್ಲದೆ, ಇದು ಸಮಯ ಮತ್ತು ಇಂಧನವನ್ನು ಉಳಿಸಲು ಸಹ ಸಹಾಯ ಮಾಡುತ್ತದೆ ಎಂದು ಹೇಳಿದರು. 

ಫಾಸ್ಟ್ಯಾಗ್ ಅನ್ನು 2016ರಲ್ಲಿ ಪ್ರಾರಂಭಿಸಲಾಯಿತು. ಈ ವೇಳೆ ನಾಲ್ಕು ಬ್ಯಾಂಕುಗಳು ಒಟ್ಟಾಗಿ ಒಂದು ಲಕ್ಷಕ್ಕೂ ಹೆಚ್ಚು ಫಾಸ್ಟ್ ಟ್ಯಾಗ್ ನೀಡಿದ್ದವು. 2017ರ ಹೊತ್ತಿಗೆ ಅದು ಏಳು ಲಕ್ಷಕ್ಕೆ ಏರಿತು. ಇನ್ನು 2018ರಲ್ಲಿ 34 ಲಕ್ಷಕ್ಕೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಲಾಗಿದೆ. 

ಸೆಂಟ್ರಲ್ ಮೋಟಾರು ವಾಹನ ನಿಯಮಗಳ ಪ್ರಕಾರ, 1989, ಡಿಸೆಂಬರ್ 1, 2017ರಿಂದ, ಹೊಸ ನಾಲ್ಕು ಚಕ್ರಗಳ ನೋಂದಣಿಗೆ ಫಾಸ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.

SCROLL FOR NEXT