ವಾಣಿಜ್ಯ

ಡಿಜಿಟಲ್ ಪಾವತಿ ವಲಯದ ಗ್ರಾಹಕರಿಗಾಗಿ ಸಂರಕ್ಷಣಾ ಸಂಸ್ಥೆ ಪ್ರಾರಂಭಿಸಲಿರುವ ಆರ್‌ಬಿಐ

Raghavendra Adiga

ನವದೆಹಲಿ: ಇತ್ತೀಚೆಗೆ ಡಿಜಿಟಲ್ ಪಾವತಿ ಎನ್ನುವುದು ಭಾರತೀಯರ ನಿತ್ಯ ಜೀವನದ ಒಂದು ಭಾಗವಾದಂತಿದೆ. ಇದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಜಿಟಲ್ ಪಾವತಿ ವ್ಯವಸ್ಥೆಯ ಗ್ರಾಹಕರ ಹಿತಾಸಕ್ತಿಗಳನ್ನು ಮತ್ತು ಅವರ ಸುರಕ್ಷತೆಯನ್ನು ನೋಡಿಕೊಳ್ಳುವ ಏಜೆನ್ಸಿಯನ್ನು ನೇಮಿಸಲು ಮುಂದಾಗಿದೆ.

ಕೇಂದ್ರ ಬ್ಯಾಂಕಿನ ಕಾರ ಡಿಜಿಟಲ್ ಪಾವತಿ ವಿಧಾನಗಳನ್ನು ತ್ವರಿತವಾಗಿ ಅಳವಡಿಕೆ ಮುಖ್ಯವಾಗಿದೆ. ಏಜೆನ್ಸಿ ಒಂದು ಸ್ವಯಂ ನಿಯಂತ್ರಣ ಸಂಸ್ಥೆಯಾಗಿದ್ದು  ಗ್ರಾಹಕರ ರಕ್ಷಣೆ, ಬೆಲೆ ಮತ್ತು ಸುರಕ್ಷತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಉತ್ತಮ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. ವಹಿವಾಟಿನ ವ್ಯಾಪಕತೆ ವಂಚಕರಿಂದ ಶೋಷಣೆ ಹೆಚ್ಚಲು ಸಹ ಕಾರಣವಾಗುತ್ತಿದ್ದು ಇದೀಗ ಕೇಂದ್ರ ಬ್ಯಾಂಕ್ ಗ್ರಾಹಕರ ಹಿತಕಾಯಲು ಮುಂದಾಗಿದೆ.

ಸರ್ಕಾರದ ಮಾಹಿತಿಯ ಪ್ರಕಾರ, ಡಿಜಿಟಲ್ ಪಾವತಿ ವಂಚನೆಗಳು ಭಾರತದ ಎಲ್ಲಾ ಬ್ಯಾಂಕ್ ವಂಚನೆಗಳಲ್ಲಿ ಅರ್ಧದಷ್ಟು ಪಾಲನ್ನು ಹೊಂದಿವೆ. ಕಳೆದ ಕೆಲವು ವರ್ಷಗಳಿಂದ ಎಟಿಎಂ / ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು 1 ಲಕ್ಷ ರೂ.ಗಿಂತ ಹೆಚ್ಚಿನ ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳಿಗೆ ಸಂಬಂಧಿಸಿದ ವಂಚನೆಗಳು ತೀವ್ರವಾಗಿ ಏರಿವೆ ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳು ತೋರಿಸುತ್ತವೆ.

ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಬೆಳವಣಿಗೆ ಮತ್ತು ಪಾವತಿಘಟಕಗಳು ಗಳಿಸಿದ ಪರಿಪಕ್ವತೆಯೊಂದಿಗೆ, ಘಟಕಗಳ ಕ್ರಮಬದ್ಧ ಕಾರ್ಯಾಚರಣೆಗಾಗಿ ಸ್ವಯಂ-ನಿಯಂತ್ರಣ ಸಂಸ್ಥೆ (ಎಸ್‌ಆರ್‌ಒ) ಸ್ಥಾಪನೆ ಅಪೇಕ್ಷಣೀಯವಾಗಿದೆ. ಭದ್ರತೆ, ಗ್ರಾಹಕರ ರಕ್ಷಣೆ ಮತ್ತು ಬೆಲೆಗಳ ಬಗ್ಗೆ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ಆರ್‌ಬಿಐ 2020 ರ ಏಪ್ರಿಲ್ ವೇಳೆಗೆ ಎಸ್‌ಆರ್‌ಒ ಸ್ಥಾಪಿಸುವ ನಿಯಮವನ್ನು ಜಾರಿಗೆ ತರಲಿದೆ. ಎಸ್‌ಆರ್‌ಒ  ಪ್ಲೇಯರ್ಸ್ ಹಾಗೂ ನಿಯಂತ್ರಕ / ಮೇಲ್ವಿಚಾರಕರ ನಡುವೆ ದ್ವಿಮುಖ ಸಂವಹನ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ ”ಎಂದು ಆರ್‌ಬಿಐ ಹೇಳಿಕೆ ತಿಳಿಸಿದೆ.

SCROLL FOR NEXT