ಸಬ್ಸಿಡಿರಹಿತ ಸಿಲಿಂಡರ್ ಬೆಲೆ ಹೆಚ್ಚಳ , ಗ್ರಾಹಕರಿಗೆ ಮತ್ತೊಂದು ಶಾಕ್ 
ವಾಣಿಜ್ಯ

ಸಬ್ಸಿಡಿರಹಿತ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರಿಗೆ ಮತ್ತೊಂದು ಶಾಕ್

ಗಗನಕ್ಕೇರಿದ್ದ ತರಕಾರಿ ಮತ್ತು ಈರುಳ್ಳಿ ಬೆಲೆ ಇಳಿಯುತ್ತಿದ್ದಂತೆ ಗ್ರಾಹಕರಿಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದ್ದು, ಅಡುಗೆ ಅನಿಲ ಸಿಲಿಂಡರ್ (ಎಲ್ಪಿ ಜಿ) ಬೆಲೆ ಭಾರೀ ಹೆಚ್ಚಳವಾಗಿದೆ.

ನವದೆಹಲಿ: ಗಗನಕ್ಕೇರಿದ್ದ ತರಕಾರಿ ಮತ್ತು ಈರುಳ್ಳಿ ಬೆಲೆ ಇಳಿಯುತ್ತಿದ್ದಂತೆ ಗ್ರಾಹಕರಿಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದ್ದು, ಅಡುಗೆ ಅನಿಲ ಸಿಲಿಂಡರ್ (ಎಲ್ಪಿ ಜಿ) ಬೆಲೆ ಭಾರೀ ಹೆಚ್ಚಳವಾಗಿದೆ.

ಎಲ್ಪಿಜಿ ಸಿಲಿಂಡರ್ಗಳು ಸರಾಸರಿ ಶೇ.20ರಷ್ಟು ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದಲೇ ಸಬ್ಸಿಡಿರಹಿತ ಸಿಲಿಂಡರ್ ಗಳ ಬೆಲೆ ಭಾರೀ ಏರಿಕೆಯಾಗಲಿದೆ. ಇದಕ್ಕೂ ಮೊದಲು ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಏರಿಕೆಯಾಗಿತ್ತು.

ಇದೀಗ ಮತ್ತೆ ಹೆಚ್ಚಳವಾಗಿರುವ ಸಿಲಿಂಡರ್ ಬೆಲೆಯಿಂದ ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಒಟ್ಟಾರೆ ಶೇ. 20ರಷ್ಟು ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆಯಾದಂತಾಗಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮೆಟ್ರೋ ನಗರಗಳಲ್ಲಿ ಹೆಚ್ಚಳವಾಗಿದೆ. ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ಗಳ ಬೆಲೆ 858.50 ರೂ. (144.50 ರೂ. ಹೆಚ್ಚಳ) ಇದೆ. ಕೊಲ್ಕತಾದಲ್ಲಿ 896 ರೂ. (149 ರೂ. ಹೆಚ್ಚಳ), ಮುಂಬೈನಲ್ಲಿ 829.50 (145 ರೂ. ಹೆಚ್ಚಳ), ಹಾಗೂ ಚೆನ್ನೈನಲ್ಲಿ 881 ರೂ. (147 ರೂ. ಹೆಚ್ಚಳ) ಆಗಿದೆ. ಬೆಂಗಳೂರಿನಲ್ಲಿ ಇಂಡೇನ್ ಸಿಲಿಂಡರ್ ಬೆಲೆ 850 ರೂಪಾಯಿ ಗಡಿ ದಾಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict effect: LPG ಕೊರತೆ ತೀವ್ರ; ಮನೆಗಳಲ್ಲಿ PNG, ಹೋಟೆಲ್ ಗಳು ಕಲ್ಲಿದ್ದಲು ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ

Strait of Hormuz: 'ಹೌದು.. ನಮ್ಮ ಆಪ್ತ ರಾಷ್ಟ್ರ'... ಭಾರತದ ನೌಕೆಗಳಿಗೆ ಅನುಮತಿ ಕುರಿತು ಇರಾನ್ ರಾಯಭಾರಿ ಹೇಳಿಕೆ!

West Asia conflict: ಇರಾನ್ ಉದ್ವಿಗ್ನತೆ ನಡುವೆಯೂ Hormuz ಜಲಸಂಧಿಯಿಂದ ಸುರಕ್ಷಿತವಾಗಿ ಬಂದ ಭಾರತ ಧ್ವಜ ಹೊತ್ತ ಹಡಗು!

Video: 'ನಿಂಗಿದು ಬೇಕಿತ್ತಾ ಮಗನೇ..': ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ, ಕೆರಳಿ ಕೆಂಡವಾದ Salman Agha

West Asia conflict: ಮಸ್ಕತ್‌ನಲ್ಲಿ ಡ್ರೋನ್ ದಾಳಿ, ಭಾರತ ಮೂಲದ ಇಬ್ಬರ ಸಾವು

SCROLL FOR NEXT