ಸಾಂದರ್ಭಿಕ ಚಿತ್ರ 
ವಾಣಿಜ್ಯ

ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.59ಕ್ಕೆ ಏರಿಕೆ

ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆಯ ಪರಿಣಾಮ 2020ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.59ಕ್ಕೆ ಏರಿಯಾಗಿದೆ.

ನವದೆಹಲಿ: ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆಯ ಪರಿಣಾಮ 2020ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.59ಕ್ಕೆ ಏರಿಯಾಗಿದೆ.

ರಾಷ್ಟ್ರೀಯ ಅಂಕಿ-ಅಂಶ ಕಚೇರಿ ಬುಧವಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ಜನವರಿ ಶೇ. 7.57ಕ್ಕೆ ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ದರ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕಹಾಕಲಾಗಿದ್ದು, ಆಹಾರ ಉತ್ಪನ್ನಗಳ ಹೆಚ್ಚಿನ ದರಗಳಿಂದಾಗಿ ಜನವರಿಯಲ್ಲಿ ಶೇ 7.59 ಕ್ಕೆ ಏರಿದೆ. ಚಿಲ್ಲರೆ ಹಣದುಬ್ಬರ 2019 ರ ಡಿಸೆಂಬರ್‌ನಲ್ಲಿ ಶೇ 7.35ರಷ್ಟು ಹಾಗೂ ಕಳೆದ ವರ್ಷದ ಜನವರಿಯಲ್ಲಿ ಶೇ 1.97 ರಷ್ಟಿತ್ತು.

ಇನ್ನು ಪ್ರೊಟೀನ್ ಜಾಸ್ತಿ ಇರುವ ಉತ್ಪನ್ನಗಳಾದ ಮಾಂಸ, ಮೀನುಗಳ ಹಣದುಬ್ಬರ ಶೇಕಡ 10.50 ಏರಿಕೆಯಾಗಿದ್ದು, ಮೊಟ್ಟೆಯ ಹಣದುಬ್ಬರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 10.41 ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರವು ಆರ್ಥಿಕತೆ ಅಂಶಗಳಲ್ಲಿ ಪ್ರಮುಖವಾದುದು. ಇದರ ಮೇಲೆ ಆರ್‌ಬಿಐ ಸತತ ನಿಗಾ ಇಟ್ಟಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!