ವಾಣಿಜ್ಯ

ಬ್ರಿಟನ್, ಫ್ರಾನ್ಸ್ ಹಿಂದಿಕ್ಕಿದ ಭಾರತ ಈಗ ಜಗತ್ತಿನ 5ನೇ ಅತಿದೊಡ್ಡ ಅರ್ಥವ್ಯವಸ್ಥೆ!

Vishwanath S

ನವದೆಹಲಿ: 2019ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನ ಆರ್ಥಿಕತೆಗಳನ್ನು ಹಿಂದಿಕ್ಕಿದ ಭಾರತ ಈಗ ಜಗತ್ತಿನ ಐದನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

ಅಮೆರಿಕದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ತನ್ನ ವರದಿಯಲ್ಲಿ ಪ್ರಕಟಿಸಿದೆ. ಭಾರತವು ತನ್ನ ಹಳೆಯ ನೀತಿಗಳನ್ನು ತೊರೆದು ಮುಕ್ತ ಮಾರುಕಟ್ಟೆಯ ಅರ್ಥ ವ್ಯವಸ್ಥೆಯ ಕಡೆಗೆ ಹೆಜ್ಜೆ ಹಾಕುತ್ತಿದೆ. ಭಾರತದ ಅರ್ಥ ವ್ಯವಸ್ಥೆ ಸದ್ಯ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನಕ್ಕೇರಿದೆ. 

ಬ್ರಿಟನ್ ಅರ್ಥ ವ್ಯವಸ್ಥೆ 2.83 ಲಕ್ಷ ಕೋಟಿ ಡಾಲರ್ ಆದರೆ ಫ್ರಾನ್ಸ್ ನದ್ದು 2.71 ಲಕ್ಷ ಕೋಟಿ ಡಾಲರ್. ಈ ಎರಡು ದೇಶಗಳನ್ನು ಹಿಂದಿಕ್ಕಿರುವ ಭಾರತದ ಅರ್ಥ ವ್ಯವಸ್ಥೆ 2.94 ಲಕ್ಷ ಕೋಟಿ ಡಾಲರ್ ಆಗಿದೆ. 

SCROLL FOR NEXT