ಆರ್ ಬಿಐ ನಿಂದ ಹೊಸ ಮೊಬೈಲ್ ಆಪ್ ಬಿಡುಗಡೆ: ಯಾರಿಗೆ ಉಪಯುಕ್ತ, ವಿಶೇಷಗಳ ಬಗ್ಗೆ ಇಲ್ಲಿದೆ ಮಾಹಿತಿ 
ವಾಣಿಜ್ಯ

ಆರ್ ಬಿಐ ನಿಂದ ಹೊಸ ಮೊಬೈಲ್ ಆಪ್ ಬಿಡುಗಡೆ: ಯಾರಿಗೆ ಉಪಯುಕ್ತ, ವಿಶೇಷಗಳ ಬಗ್ಗೆ ಇಲ್ಲಿದೆ ಮಾಹಿತಿ 

ಭಾರತೀಯ ರಿಸರ್ವ್ ಬ್ಯಾಂಕ್ ವಿಶಿಷ್ಟ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ದೃಷ್ಟಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾರತೀಯ ಬ್ಯಾಂಕ್ ನೋಟ್ ಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಲಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ ವಿಶಿಷ್ಟ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ದೃಷ್ಟಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾರತೀಯ ಬ್ಯಾಂಕ್ ನೋಟ್ ಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಲಿದೆ. 

ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್-(ಮನಿ) ಹೊಸದಾಗಿ ಬಿಡುಗಡೆಯಾಗಿರುವ ಆಪ್ ನ ಹೆಸರಾಗಿದೆ. ಪ್ರಸ್ತುತ ಭಾರತೀಯ ಬ್ಯಾಂಕ್ ನೋಟ್ ಗಳಲ್ಲಿ ದೃಷ್ಟಿ ದೋಷ ಹೊಂದಿರುವವರಿಗೆ ಗುರುತಿಸಲು ಸಾಧ್ಯವಾಗುವ ವೈಶಿಷ್ಟ್ಯಗಳಿವೆ. 

ಭಾರತೀಯ ಬ್ಯಾಂಕ್ ಗಳ ನೋಟ್ ಗಳನ್ನು ದೃಷ್ಟಿ ದೋಷ ಹೊಂದಿರುವವರು ಮತ್ತಷ್ಟು ಪರಿಣಾಮಕಾರಿಯಾಗಿ ಗುರುತಿಸುವುದಕ್ಕೆ ತಾಂತ್ರಿಕ ಪ್ರಗತಿ ಹೊಸತನಕ್ಕೆ ತೆರೆದುಕೊಂಡಿದೆ, ಈ ಮೂಲಕ ಅವರ ದೈನಂದಿನ ವಹಿವಾಟುಗಳಿಗೆ ಅನುಕೂಲವಾಗಲಿದೆ ಎಂದು ಆರ್ ಬಿಐ ಹೇಳಿದೆ.
 
ಈ ಆಪ್ ನ ವಿಶೇಷತೆಗಳೇನು, ಹೇಗೆ ಕಾರ್ಯನಿರ್ವಹಣೆ ಮಾಡಲಿದೆ?

  • ಈ ಮೊಬೈಲ್ ಆಪ್ ಮಹಾತ್ಮಾ ಗಾಂಧಿ ಸರಣಿ ಹಾಗೂ ಮಹಾತ್ಮಾ ಗಾಂಧಿ ಹೊಸ ಸರಣಿಗಳ ಬ್ಯಾಂಕ್ ನೋಟ್ ಗಳನ್ನು ಗುರುತಿಸುವ, ನೋಟಿನ ಮುಂಭಾಗ, ಹಿಮ್ಮುಖಗಳನ್ನು ಗುರುತಿಸುವ, ಅಥವಾ ಅರ್ಧ ಮಡಚಿದ ನೋಟುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. 
  • ಹಿಂದಿ, ಇಂಗ್ಲೀಷ್ ಭಾಷೆಗಳ ಧ್ವನಿಯಲ್ಲಿ ನೋಟುಗಳ ಮುಖಬೆಲೆಯನ್ನೂ ಗುರುತಿಸುವ ಸಾಮರ್ಥ್ಯವನ್ನು ಹೊಂದಿರುವುದು ಈ ಆಪ್ ನ ವೈಶಿಷ್ಟ್ಯವಾಗಿದ್ದು, ಧ್ವನಿ ನಿಯಂತ್ರಿತ ನ್ಯಾವಿಗೇಷನ್ ಹೊಂದಿದೆ. 
  • ಈ ಆಪ್ ಅಂತರ್ಜಾಲ ಸೇವೆಯ ಹೊರತಾಗಿಯೂ ಆಫ್ ಲೈನ್ ನಲ್ಲಿ ಈ ಆಪ್ ಕಾರ್ಯನಿರ್ವಹಣೆ ಮಾಡಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ