ವಾಣಿಜ್ಯ

2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಏರಿಕೆ! 

Srinivas Rao BV

ಮುಂಬೈ: 2019 ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ವಂಚನೆಯ ಪ್ರಕರಣಗಳು ಶೇ.15 ರಷ್ಟು ಏರಿಕೆಯಾಗಿದ್ದು, ವಂಚನೆಯಾಗಿರುವ ಮೊತ್ತ ಶೇ.74 ರಷ್ಟು ಏರಿಕೆಯಾಗಿದೆ ಎಂದು ಆರ್ ಬಿ ಐ ಹೇಳಿದೆ. 

ಟ್ರೆಂಡ್ ಆಂಡ್ ಪ್ರೊಗ್ರೆಸ್ ಆಫ್ ಬ್ಯಾಂಕಿಂಗ್ ಇನ್ ಇಂಡಿಯಾ-2018-19 ಎಂಬ ವರದಿಯಲ್ಲಿ ಆರ್ ಬಿಐ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ. 2018 ರ ಹಣಕಾಸು ವರ್ಷದಲ್ಲಿ 5,916 ವಂಚನೆ ಪ್ರಕರಣಗಳು ಬೆಳಕಿಗೆ ಬಂದಿತ್ತು. 2019 ರಲ್ಲಿ ಬರೊಬ್ಬರಿ 6,801 ಪ್ರಕರಣಗಳು ಬೆಳಕಿಗೆ ಬಂದಿವೆ, 2018 ರಲ್ಲಿ 41,167 ಕೋಟಿ ರೂಪಾಯಿ ಮೊತ್ತದ ವಂಚನೆ ನಡೆದಿತ್ತು. 2019 ರಲ್ಲಿ ಇದು 71,543 ಕೋಟಿಗೆ ಏರಿಕೆಯಾಗಿದೆ. 

2018-19 ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಹೆಚ್ಚಿನ ವಂಚನೆಯನ್ನು ವರದಿ ಮಾಡಿದ್ದು ಶೇ.55 ರಷ್ಟು ಪ್ರಕರಣಗಳು ಹಾಗೂ ಶೇ.90 ರಷ್ಟು ಹಣ ಇದರಲ್ಲಿತ್ತು. ಖಾಸಗಿ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ವಿದೇಶಿ ಬ್ಯಾಂಕ್ ಗಳದ್ದು ಶೇ.30.7 ಹಾಗೂ ಶೇ.11.2 ರಷ್ಟು ಅನುಪಾತದಲ್ಲಿದೆ. 

SCROLL FOR NEXT