ಸಂಗ್ರಹ ಚಿತ್ರ 
ವಾಣಿಜ್ಯ

2019-20ರ ಭಾರತದ ಬೆಳವಣಿಗೆಯ ದರವನ್ನು ಶೇ. 4.8ಕ್ಕಿಳಿಸಿದ ಐಎಂಎಫ್

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸಕ್ತ ಹಣಕಾಸು ವರ್ಷದ ಭಾರತದ ಬೆಳವಣಿಗೆಯ ಅಂದಾಜನ್ನು ಶೇಕಡಾ 4.8 ಕ್ಕೆ ಇಳಿಸಿದೆ. ಮತ್ತು ಇದೊಂದು "ನೆಗೆಟಿವ್ ಸರ್ ಪ್ರೈಜ್" ಎಂದು ಉಲ್ಲೇಖಿಸಿದೆ.

ಯುನೈಟೆಡ್ ನೇಷನ್ಸ್: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸಕ್ತ ಹಣಕಾಸು ವರ್ಷದ ಭಾರತದ ಬೆಳವಣಿಗೆಯ ಅಂದಾಜನ್ನು ಶೇಕಡಾ 4.8 ಕ್ಕೆ ಇಳಿಸಿದೆ. ಮತ್ತು ಇದೊಂದು "ನೆಗೆಟಿವ್ ಸರ್ ಪ್ರೈಜ್" ಎಂದು ಉಲ್ಲೇಖಿಸಿದೆ.

ಇದಕ್ಕೆ ಮುನ್ನ ಕಳೆದ ಅಕ್ಟೋಬರ್ ನಲ್ಲಿ ಭಾರತದ ಬೆಳವಣಿಗೆ ದರವನ್ನು  ಶೇಕಡಾ 6.1 ಕ್ಕೆ ಉಇಳಿಸಿದ್ದ ಸಂಸ್ಥೆ ಇದೀಗ ಮತ್ತಷ್ಟು ಪ್ರಮಾಣದಲ್ಲಿ ಕಡಿತಗೊಳಿಸಿದೆ.

ಐಎಂಎಫ್‌ನ ವರ್ಲ್ಡ್ ಎಕನಾಮಿಕ್ ಔಟ್ ಲುಕ್  (ಡಬ್ಲ್ಯುಇಒ) ಭಾರತದ ಆರ್ಥಿಕ ಕುಸಿತವನ್ನು ಕಳೆದ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಯ ಮಟ್ಟದಲ್ಲಿ ನೋಡಿದರೆ  ಶೇ 0.1 ರಷ್ಟು ಕಡಿತವಾಗಿದೆ ಎಂದು ಹೇಳಿದೆ. ಹಾಗೆಯೇ 2021 ರ ಜಾಗತಿಕ ಆರ್ಥಿಕ ಸೂಚನೆಯನ್ನು ಶೇಕಡಾ 0.2 ರಷ್ಟು ಕಡಿತಗೊಳಿಸಿ 3.4 ಕ್ಕೆ ಇಳಿಸಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಶೇಕಡಾ 1 ರಿಂದ 5.8 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಐಎಂಎಫ್ ಈ ವರ್ಷ ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಎರಡನೇ ಪ್ರಮುಖ ಆರ್ಥಿಕತೆ ಎಂದು ಹೇಳಿದೆ.ಈ ವರ್ಷ ಹಾಗೂ ಮುಂದಿನ ವರ್ಷದಲ್ಲಿ ಚಿನಾ ಬೆಳವಣಿಗೆ ದರ ಕ್ರಮವಾಗಿ  6.1 ಮತ್ತು ಶೇ. 6.4 ರಷ್ಟು ಇದೆ ಎಂದು ಸಂಸ್ಥೆ ಅಂದಾಜಿಸಿದೆ. ಆದರೆ ಐಎಂಎಫ್ ಪ್ರಕಾರ, 2021 ರಲ್ಲಿ ಭಾರತವು ಅಗ್ರ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಭಾರತ ಆ ಸಾಲಿನಲ್ಲಿ ಶೇ  6.5 ರಷ್ಟು ಬೆಳವಣಿಗೆ ಸಾಧಿಸುವ ವಿಶ್ವಾಸವನ್ನು ಸಂಸ್ಥೆ ಹೊಂದಿದ್ದೆ/

ಭಾರತದ ಬೆಳವಣಿಗೆಯ ದರವನ್ನು ಇಳಿಸಲು ಕಾರಣವೆಂದರೆ "ಬ್ಯಾಂಕೇತರ ಹಣಕಾಸು ವಲಯದ ಒತ್ತಡ ಮತ್ತು ಸಾಲದ ಬೆಳವಣಿಗೆಯ ಕುಸಿತದ ಮಧ್ಯೆ ದೇಶೀಯ ಬೇಡಿಕೆ ನಿರೀಕ್ಷೆಗಿಂತ ತೀವ್ರವಾಗಿ ನಿಧಾನಗತಿ ತಲುಪಿರುವುದು" ಎಂದು ಐಎಂಎಫ್ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಶೇಕಡ 5 ಎಂದು ವಿಶ್ವಬ್ಯಾಂಕ್ ಅಂದಾಜಿಸಿದರೆ, ಯುಎನ್ ಅದನ್ನು ಶೇ 5.7 ರಷ್ಟಿದೆ ಎಂದು ಹೇಳಿತ್ತು.

ಜಾಗತಿಕವಾಗಿ, "ವ್ಯಾಪಾರ ನೀತಿ ಅನಿಶ್ಚಿತತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಲ್ಲಿನ ವಿಲಕ್ಷಣ ಒತ್ತಡವು 2019 ರ ದ್ವಿತೀಯಾರ್ಧದಲ್ಲಿ ಜಾಗತಿಕ ಆರ್ಥಿಕ ಚಟುವಟಿಕೆಯ ಮೇಲೆ, ವಿಶೇಷವಾಗಿ ಉತ್ಪಾದನೆ ಮತ್ತು ವ್ಯಾಪಾರದ ಮೇಲೆ ಪರಿಣಾಮವನ್ನು ತಂದಿದೆ"ಎಂದು ಐಎಂಎಫ್ ಹೇಳಿದೆ. ಹವಾಮಾನ ಸಂಬಂಧಿತ ವಿಪತ್ತು ಹಲವಾರು ದೇಶಗಳಲ್ಲಿ ಸಾಮಾಜಿಕ ಅಶಾಂತಿಯನ್ನು ತೀವ್ರಗೊಳಿಸಿದೆಹೊಸ ಸವಾಲುಗಳನ್ನು ಒಡ್ಡಿದೆ" ಎಂದು ಅದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT