ಮಹಾನಿರ್ದೇಶಕ ಸ್ಥಾನಕ್ಕೆ ನೀಮುಚ್ವಾಲಾ ರಾಜೀನಾಮೆ, ಶೇ.2ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದ ವಿಪ್ರೋ
ಭಾರತದ ಪ್ರಮುಖ ಐಟಿ ಉದ್ಯಮ ವಿಪ್ರೋನ ಸಿಇಒ ಮತ್ತು ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿದ ನಂತರ ಶುಕ್ರವಾರ ಕಂಪನಿಯ ಸ್ಕ್ರಿಪ್ಟ್ ಶೇಕಡಾ 2ಕ್ಕಿಂತಲೂ ಹೆಚ್ಚಿನ ಅಂಶ ಕುಸಿತ ದಾಖಲಿಸಿದೆ. ಬಿಎಸ್ಇಯಲ್ಲಿ ಸಂಸ್ಥೆಯ ಷೇರುಗಳು ಶೇಕಡಾ 2.28 ರಷ್ಟು ಕುಸಿದು 235.30 ರೂ.ಗೆ ತಲುಪಿದೆ.
ನವದೆಹಲಿ: ಭಾರತದ ಪ್ರಮುಖ ಐಟಿ ಉದ್ಯಮ ವಿಪ್ರೋನ ಸಿಇಒ ಮತ್ತು ಎಂಡಿ ಅಬಿದಾಲಿ ಝಡ್ ನೀಮುಚ್ವಾಲಾ ತಮ್ಮ ಸ್ಥಾನದಿಂದ ನಿರ್ಗಮಿಸಲು ನಿರ್ಧರಿಸಿದ ನಂತರ ಶುಕ್ರವಾರ ಕಂಪನಿಯ ಸ್ಕ್ರಿಪ್ಟ್ ಶೇಕಡಾ 2ಕ್ಕಿಂತಲೂ ಹೆಚ್ಚಿನ ಅಂಶ ಕುಸಿತ ದಾಖಲಿಸಿದೆ. ಬಿಎಸ್ಇಯಲ್ಲಿ ಸಂಸ್ಥೆಯ ಷೇರುಗಳು ಶೇಕಡಾ 2.28 ರಷ್ಟು ಕುಸಿದು 235.30 ರೂ.ಗೆ ತಲುಪಿದೆ.
ಎನ್ಎಸ್ಇಯಲ್ಲಿ ಶೇಕಡಾ 2.28 ರಷ್ಟು ಇಳಿದು 235.20 ರೂ.ಗೆ ತಲುಪಿದೆ.
ಕೌಟುಂಬಿಕ ಕಾರಣಗಳೀಂದ ನೀಮುಚ್ವಾಲಾ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ವಿಪ್ರೋ ಇಂದು ಬೆಳಿಗ್ಗೆ ಪ್ರಕಟಿಸಿದೆ.
ಇನ್ನು ಸುಗಮ ವ್ಯವಹಾರಕ್ಕಾಗಿಉತ್ತರಾಧಿಕಾರಿಯನ್ನು ನೇಮಿಸುವವರೆಗೆ ನೀಮುಚ್ವಾಲಾ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಕಂಪನಿಯು ಬಿಎಸ್ಇ ಫೈಲಿಂಗ್ನಲ್ಲಿ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.