ವಿದೇಶಿ ವಿನಿಮಯ ಮೀಸಲು 1.27 ಬಿಲಿಯನ್ ಡಾಲರ್ ನಷ್ಟು ಏರಿಕೆ!
ಕಳೆದ ವಾರ ತೀವ್ರ ಕುಸಿತ ಕಂಡಿದ್ದ ಭಾರತದ ವಿದೇಶಿ ವಿನಿಮಯ ಮೀಸಲು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ.
ನವದೆಹಲಿ: ಕಳೆದ ವಾರ ತೀವ್ರ ಕುಸಿತ ಕಂಡಿದ್ದ ಭಾರತದ ವಿದೇಶಿ ವಿನಿಮಯ ಮೀಸಲು ಈ ವಾರ 1.27 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದೆ.
506.84 ಬಿಲಿಯಬ್ ಡಾಲರ್ ಗೆ ಏರಿಕೆಯಾಗಿದೆ ಎಂದು ಆರ್ ಬಿಐ ನ ಅಂಕಿಂಶಗಳಿಂದ ತಿಳಿದುಬಂದಿದೆ. ಜೂ.19 ರಂದು ಮುಕ್ತಾಯಗೊಂಡಿದ್ದ ಕಳೆದ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 2.08 ಬಿಲಿಯನ್ ಡಾಲರ್ ನಷ್ಟು ಇಳಿಕೆಯಾಗಿ 505.57 ಬಿಲಿಯನ್ ಡಾಲರ್ ಗೆ ಕುಸಿದಿತ್ತು.
ಚಿನ್ನದ ಮೀಸಲು 707 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 33.52 ಬಿಲಿಯನ್ ಡಾಲರ್ ನಷ್ಟಾಗಿದೆ. ಐಎಂಎಫ್ ನಿಂದ ವಿಶೇಷವಾಗಿ ಹಿಂತೆಗೆಯಬಹುದಾದ ಹಕ್ಕುಗಳ ಮೊತ್ತ 3ಮಿಲಿಯನ್ ಡಾಲರ್ ನಷ್ಟು ಕಡಿಮೆ ಮಾಡಲಾಗಿದ್ದು 1.44 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಆದರೆ ಐಎಂಎಫ್ ನಲ್ಲಿ ದೇಶದ ಮೀಸಲು ಸ್ಥಿತಿ 3 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 4.27 ಬಿಲಿಯನ್ ಗೆ ಏರಿಕೆಯಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.