ವಂದೇ ಭಾರತ್ ಟ್ರೈನ್ 
ವಾಣಿಜ್ಯ

44 ವಂದೇ ಭಾರತ್ ಟ್ರೈನ್ ಗಳ ಬಿಡ್ ನಲ್ಲಿ ಚೀನಾ ಸಂಸ್ಥೆ ಭಾಗಿ!

ದೇಶಿಯ ಟ್ರೈನ್ 18 ಯೋಜನೆಗೆ ಕರೆಯಲಾಗಿದ್ದ ಟೆಂಡರ್ ನಲ್ಲಿ ಭಾಗವಹಿಸಿದ್ದ ಬಿಡ್ಡರ್ ಗಳ ಪೈಕಿ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ ಆರ್ ಕಾರ್ಪೊರ್ಷನ್ ಸಹ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ.  

ನವದೆಹಲಿ: ದೇಶಿಯ ಟ್ರೈನ್ 18 ಯೋಜನೆಗೆ ಕರೆಯಲಾಗಿದ್ದ ಟೆಂಡರ್ ನಲ್ಲಿ ಭಾಗವಹಿಸಿದ್ದ ಬಿಡ್ಡರ್ ಗಳ ಪೈಕಿ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ ಆರ್ ಕಾರ್ಪೊರ್ಷನ್ ಸಹ ಇದೆ ಎಂಬ ಮಾಹಿತಿ ಬಹಿರಂಗವಾಗಿದೆ.  

ವಂದೇ ಭಾರತ್ ಎಂಬ ಹೆಸರಿನಡಿಯಲ್ಲಿ ಸಂಚರಿಸಲಿರುವ ದೇಶಿಯ ಸೆಮಿ-ಹೈಸ್ಪೀಡ್ ರೈಲು ಟ್ರೈನ್ 18 ಗಳ ಎಲೆಟ್ರಿಕ್ ಟ್ರಾಕ್ಷನ್ ಕಿಟ್ ಗಳಿಗೆ ಪ್ರೊಪಲ್ಷನ್ ಸಿಸ್ಟಮ್ ಗಳನ್ನು ಪೂರೈಕೆ ಮಾಡಲು ಡಿಸೆಂಬರ್ ನಲ್ಲಿ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ನಲ್ಲಿ ಭಾಗವಹಿಸಿರುವ ಏಕೈಕ ವಿದೇಶಿ ಸಂಸ್ಥೆ ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್ ಆರ್ ಕಾರ್ಪೊರೇಷನ್ ಆಗಿದೆ. 

ಸಿಆರ್ ಆರ್ ಸಿ ಪ್ ಪಯೋನೀರ್ ಎಲೆಕ್ಟ್ರಿಕ್ (ಇಂಡಿಯಾ) ಪ್ರೈವೆಟ್ ಲಿಮಿಟೆಡ್ ನ ಬಿಡ್ ಚೀನಾದ ಸಿಆರ್ ಆರ್ ಸಿ ಕಾರ್ಪೊರೇಷನ್ ಲಿಮಿಟೆಡ್ ಗುರುಗಾಂವ್ ನ ಮೂಲದ ಸಂಸ್ಥೆಯ ಸಹಭಾಗಿತ್ವದಲ್ಲಿ ಸಲ್ಲಿಸಲಾಗಿದೆ ಎಂದು ಕಂಪನಿಯ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಟ್ರೈನ್ 18 ನ ಮುಂದಿನ ಭಾಗದ ಯೋಜನೆಯಲ್ಲಿ 44 ಟ್ರೈನ್ ಗಳನ್ನು ತಯಾರಿಸಲಾಗುತ್ತಿದ್ದು, ಇದಕ್ಕಾಗಿ ಎಲೆಟ್ರಿಕ್ ಟ್ರಾಕ್ಷನ್ ಕಿಟ್ ಗಳಿಗೆ ಪ್ರೊಪಲ್ಷನ್ ಸಿಸ್ಟಮ್ ಗಳನ್ನು ಪೂರೈಕೆ ಮಾಡಲು ಆಹ್ವಾನಿಸಿದ್ದ ಟೆಂಡರ್ ಗಳಿಗೆ 6 ಕಂಪನಿಗಳು ಅರ್ಜಿ ಸಲ್ಲಿಸಿದ್ದವು. 
ಚೀನಾದ ಕಂಪನಿಯನ್ನು ಹೊರತುಪಡಿಸಿ, ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ಹೈದರಾಬಾದ್ ನ ಮೂಲದ ಮೇಧಾ ಗ್ರೂಪ್, ಎಲೆಕ್ಟ್ರೋ ವೇವ್ಸ್ ಎಲೆಕ್ಟ್ರಾನಿಕ್ ಪ್ರೈವೆಟ್ ಲಿಮಿಟೆಡ್ ಹಾಗೂ ಮುಂಬೈ ಮೂಲದ ಪವರ್ನೆಟಿಕ್ಸ್ ಎಕ್ವಿಪ್ಮೆಂಟ್ಸ್ ಪ್ರೈವೆಟ್ ಲಿಮಿಟೆಡ್ ಸಹ ಟೆಂಡರ್ ನಲ್ಲಿ ಭಾಗವಹಿಸಿವೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಮೊದಲ ಟ್ರೈನ್ 18 ಗೆ ಒಟ್ಟಾರೆ 100 ಕೋಟಿ ರೂಪಾಯಿ ಖರ್ಚಾಗಿದ್ದರೆ 35 ಕೋಟಿ ರೂಪಾಯಿ ಎಲೆಟ್ರಿಕ್ ಟ್ರಾಕ್ಷನ್ ಕಿಟ್ ನ  ಪ್ರೊಪಲ್ಷನ್ ಸಿಸ್ಟಮ್ ಗಳಿಗಾಗಿಯೇ ಖರ್ಚಾಗಿದೆ, ಅದೇ ಖರ್ಚು-ವೆಚ್ಚಗಳನ್ನು 44  ಟ್ರೈನ್ ಗಳಿಗೆ ಲೆಕ್ಕ ಹಾಕಿದರೆ ಈಗ 1,500 ಕೋಟಿ ರೂಪಾಯಿಗಳಾಗುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT