ವಾಣಿಜ್ಯ

ಆರ್ ಬಿಐ ಡೆಪ್ಯುಟಿ ಗವರ್ನರ್ ಹುದ್ದೆಗೆ 8 ಮಂದಿ ಶಾರ್ಟ್ ಲಿಸ್ಟ್, ಜುಲೈ 23ರಂದು ಸಂದರ್ಶನ

Lingaraj Badiger

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನೂತನ ಡೆಪ್ಯುಟಿ ಗವರ್ನರ್‌ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ ಶೋಧನಾ ಸಮಿತಿ 8 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಇವರಿಗೆ ಜುಲೈ 23ರಂದು ಸಂದರ್ಶನ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಡೆಪ್ಯುಟಿ ಗವರ್ನರ್ ಆಗಿದ್ದ ಎನ್ ಎಸ್ ವಿಶ್ವನಾಥನ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಚ್ 31 ರಂದು ವಿಸ್ತರಿಸಿದ ಅಧಿಕಾರಾವಧಿಗೂ ಮೂರು ತಿಂಗಳ ಮುಂಚಿತವಾಗಿಯೇ ರಾಜೀನಾಮೆ ನೀಡಿದ್ದು, ಅಂದಿನಿಂದ ಖಾಲಿ ಇರುವ ಡೆಪ್ಯುಟಿ ಗವರ್ನರ್ ಹುದ್ದೆಗೆ ಈಗ ಸಂದರ್ಶನ ನಿಗದಿಪಡಿಸಲಾಗಿದೆ.

ಜುಲೈ 23ರಂದು ಈ ಎಂಟು ಅಭ್ಯರ್ಥಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಲಾಗುತ್ತಿದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಯ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಗೆ ಕಳುಹಿಸಲಾಗುತ್ತದೆ.

ಆರ್‌ಬಿಐ ಡೆಪ್ಯುಟಿ ಗವರ್ನರ್ ಹುದ್ದೆಗೆ ವಿರಳ್ ಆಚಾರ್ಯ ಅವರು ರಾಜೀನಾಮೆ ನೀಡಿದ ನಂತರ ವಿಶ್ವನಾಥ್ ಅವರನ್ನು ಮತ್ತೊಂದು ವರ್ಷಕ್ಕೆ ಡೆಪ್ಯುಟಿ ಗವರ್ನರ್​ ಆಗಿ ಮುಂದುವರೆಸಲಾಗಿತ್ತು. 

SCROLL FOR NEXT