ಜಿಯೋ-ಗೂಗಲ್ ಜುಗಲ್ಬಂದಿ, ಭಾರತದಲ್ಲಿ ತಯಾರಾಗಲಿದೆ ಹುವಾಯಿ ಕಿಲ್ಲರ್ ಜಿ 
ವಾಣಿಜ್ಯ

ಜಿಯೋ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ; ಭಾರತದಲ್ಲಿ ತಯಾರಾಗಲಿದೆ ಜಿಯೋ 5 ಜಿ ಸ್ಮಾರ್ಟ್ ಫೋನ್!

ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ.7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 

ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ.7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 

ಜು.15 ರಂದು ನಡೆದ ರಿಲಾಯನ್ಸ್ ನ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, 2021 ರ ವೇಳೆಗೆ ಗೂಗಲ್ ಸಹಯೋಗದಲ್ಲಿ ಭಾರತದಲ್ಲೇ 5 ಜಿ ನೆಟ್ವರ್ಕ್ ಗೆ ಬೆಂಬಲಿಸುವ ಸ್ಮಾರ್ಟ್ ಫೋನ್ ಬಿಡುಗಡೆಯನ್ನೂ ಘೋಷಿಸಿದ್ದಾರೆ.

"ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುತ್ತಿರುವ ಗೂಗಲ್ ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇವೆ" ಎಂದು ಅಂಬಾನಿ ತಿಳಿಸಿದ್ದಾರೆ. ರಿಲಾಯನ್ಸ್ ಈಗ ಶೂನ್ಯ ಸಾಲ ಹೊಂದಿರುವ ಸಂಸ್ಥೆಯಾಗಿದೆ. 

ಗೂಗಲ್ ಹಾಗೂ ಜಿಯೋ ಜೊತೆಗೂಡಿ 2021 ರ ವೇಳೆಗೆ ಅಗ್ಗದ ದರದ 5 ಜಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಲಿವೆ. ಈ ವರೆಗೂ 100 ಮಿಲಿಯನ್ ಜಿಯೋ ಫೋನ್ ಗಳನ್ನು ಮಾರಾಟ ಮಾಡಲಾಗಿದ್ದು, ಸಾಮಾನ್ಯದ ಮೊಬೈಲ್ ಬಳಕೆದಾರರು ಸಾಂಪ್ರದಾಯಿಕ ಸ್ಮಾರ್ಟ್ ಗೆ ಅಪ್ ಗ್ರೇಡ್ ಆಗಲು ಬಯಸುತ್ತಿದ್ದಾರೆ. ನಾವು ಪ್ರಾರಂಭಿಕ ಬೆಲೆಯ 4 ಜಿ ಅಥವಾ 5 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಲಿದ್ದೇವೆ, ಗೂಗಲ್ ಹಾಗೂ ಜಿಯೋ ಇದಕ್ಕಾಗಿ ಪಾಲುದಾರಿಕೆಗೆ ಮುಂದಾಗಿದ್ದು, ಆಂಡ್ರಾಯ್ಡ್ ಆಧರಿತ ಸ್ಮಾರ್ಟ್ ಫೋನ್ ಆಪರೇಟಿಂಗ್ ಸಿಸ್ಟಮ್ ನ್ನು ತಯಾರಿಸಲಿವೆ ಎಂದು ಸಂಸ್ಥೆಯ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಘೋಷಿಸಿದ್ದಾರೆ.

ಜಿಯೋ ದೇಶಿಯ 5 ಜಿ ಟೆಲಿಕಾಂ ಸೊಲ್ಯೂಷನ್ ನ್ನು ಅಭಿವೃದ್ಧಿಪಡಿಸಿದ್ದು, 5 ಜಿ ಸ್ಪೆಕ್ಟ್ರಮ್ ಲಭ್ಯವಾದ ಬೆನ್ನಲ್ಲೇ ಜಿಯೋ ಅಭಿವೃದ್ಧಿಪಡಿಸಿರುವ 5 ಜಿ ಟೆಲಿಕಾಂ ಸೊಲ್ಯೂಷನ್ ಸಹ ಪರೀಕ್ಷೆಗೆ ಸಿದ್ಧವಾಗಲಿದೆ, ಮುಂದಿನ ವರ್ಷದ ವೇಳೆಗೆ ಫೀಲ್ಡ್ ಡೆವಲ್ಪೆಂಟ್ ಗೂ ಲಭ್ಯವಾಗಲಿದೆ ಎಂದು ಅಂಬಾನಿ ತಿಳಿಸಿದ್ದಾರೆ. ಇದೇ ವೇಳೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಸಹ ಪ್ರತಿಕ್ರಿಯೆ ನೀಡಿದ್ದು, ಜಿಯೋ ಜೊತೆ ಪಾಲುದಾರಿಕೆಗೆ ಮುಂದಾಗುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel