ಆರ್‌ಐಎಲ್ ರೈಟ್ಸ್ ಇಶ್ಯೂಗೆ ಅಗಾಧ ಪ್ರತಿಕ್ರಿಯೆ; 1.59 ಪಟ್ಟು ಚಂದಾದಾರಿಕೆ 
ವಾಣಿಜ್ಯ

ಆರ್‌ಐಎಲ್ ರೈಟ್ಸ್ ಇಶ್ಯೂಗೆ ಅಗಾಧ ಪ್ರತಿಕ್ರಿಯೆ; 1.59 ಪಟ್ಟು ಚಂದಾದಾರಿಕೆ

53,124.20 ಕೋಟಿ ರೂ.ಗಳ, ಭಾರತದಲ್ಲಿ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಘೋಷಿಸಿದೆ. 

ಮುಂಬೈ: 53,124.20 ಕೋಟಿ ರೂ.ಗಳ, ಭಾರತದಲ್ಲಿ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಘೋಷಿಸಿದೆ. 

ಇದಕ್ಕೆ ಸುಮಾರು 1.59 ಪಟ್ಟು ಚಂದಾದಾರಿಕೆ ದೊರೆತಿದ್ದು, ಒಟ್ಟಾರೆ 84,000 ಕೋಟಿ ರೂ.ಗಳಿಗೂ ಹೆಚ್ಚಿನ ಬದ್ಧತೆಯನ್ನು ಪಡೆದುಕೊಂಡಿತ್ತು. ಲಕ್ಷಾಂತರ ಸಣ್ಣ ಹೂಡಿಕೆದಾರರಿಂದ ಹಾಗೂ ಸಾವಿರಾರು ದೇಶೀಯ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದಲೂ ಸೇರಿದಂತೆ ಈ ರೈಟ್ಸ್ ಇಶ್ಯೂವಿನತ್ತ ಹೂಡಿಕೆದಾರರ ಭಾರೀ ಆಸಕ್ತಿ ವ್ಯಕ್ತವಾಗಿತ್ತು. ರೈಟ್ಸ್ ಇಶ್ಯೂವಿನ ಸಾರ್ವಜನಿಕ ಭಾಗಕ್ಕೆ 1.22 ಪಟ್ಟು ಚಂದಾದಾರಿಕೆ ಲಭಿಸಿದೆ.

ಈಕ್ವಿಟಿ ಶೇರುಗಳ ಹಂಚಿಕೆ 2020ರ ಜೂನ್ 10ರಂದು ಅಥವಾ ಆ ಸುಮಾರಿಗೆ ನಡೆಯಲಿದೆ. ರೈಟ್ಸ್ ಶೇರುಗಳನ್ನು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ 2020ರ ಜೂನ್ 12ರಂದು ಅಥವಾ ಆ ಸುಮಾರಿಗೆ ಪ್ರತ್ಯೇಕ ಐಎಸ್ಐಎನ್ ಅಡಿಯಲ್ಲಿ ಲಿಸ್ಟ್ ಮಾಡಲಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT