ವಾಣಿಜ್ಯ

ವೆಬ್‌ಸೈಟ್‌ಗಳಲ್ಲಿ ಫೋಟೋ ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯ: ಇನ್ಸ್ಟಾಗ್ರಾಮ್

Nagaraja AB

ಸ್ಯಾನ್ ಫ್ರಾನ್ಸಿಸ್ಕೋ: ಇತರ ವೆಬ್ ಸೈಟ್ ಗಳಲ್ಲಿ ಫೋಟೋಗಳನ್ನು ಎಂಬೆಡ್ ಮಾಡಲು ಬಳಕೆದಾರರ ಅನುಮತಿ ಅಗತ್ಯವಾಗಿರುತ್ತದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ. 

ಇದರರ್ಥ ಇನ್ಸ್ಟಾಗ್ರಾಮ್ ಬಳಕೆದಾರರು ಇನ್ನೊಬ್ಬರ ಇನ್ಸಾಟಾಗ್ರಾಮ್ ಪೋಸ್ಟ್ ನ್ನು ಇತರ ವೆಬ್ ಸೈಟ್ ನಲ್ಲಿ ಎಂಬೆಡ್ ಮಾಡಲು ಬಯಸಿದರೆ, ಅವನು ಅಥವಾ ಅವಳು ವ್ಯಕ್ತಿಯ ಕಾಫಿ ರೈಟ್ ಲೈಸೆನ್ಸ್ ಗಾಗಿ ಅನುಮತಿ ಪಡೆಯಬೇಕು, ಇಲ್ಲದಿದ್ದರೆ ಅವರು ಕಾಫಿರೈಟ್ ಮೊಕದ್ದಮೆ ಹೂಡಬಹುದಾಗಿದೆ. 

ಆರ್ಸ್ ಟೆಕ್ನಿಕಾ ವರದಿ ಪ್ರಕಾರ, ಫೇಸ್‌ಬುಕ್ ಒಡೆತನದ ಇನ್ಸ್ಟಾಗ್ರಾಮ್  ಇತರ ವೆಬ್‌ಸೈಟ್‌ಗಳಲ್ಲಿ ಎಂಬೆಡ್ ಮಾಡಲಾಗಿರುವ ಚಿತ್ರಗಳ ಪ್ರದರ್ಶನಕ್ಕೆ ಕಾಫಿರೈಟ್ ಅನುಮತಿಯನ್ನು ಬಳಕೆದಾರರಿಗೆ ನೀಡಿಲ್ಲ. 

ಇಲ್ಲಿಯವರೆಗೆ, ಫೋಟೋಗಳನ್ನು ನೇರವಾಗಿ ಹಾಕುವ ಬದಲು ಎಂಬೆಡ್ ಮಾಡುವುದು ಹಕ್ಕುಸ್ವಾಮ್ಯ ಹಕ್ಕಿಗೆ ವಿರೋಧ ಎಂಬುದನ್ನು ಬಳಕೆದಾರರು ನಂಬಿದ್ದರು. ನಮ್ಮ ನಿಯಮಗಳು ಉಪ ಪರವಾನಗಿ (ಸಬ್ ಲೈಸೆನ್ಸ್ ) ನೀಡಲು ಅವಕಾಶ ಮಾಡಿಕೊಟ್ಟರೂ, ಇತರ ವೆಬ್ ಸೈಟ್ ಗಳಲ್ಲಿ ಎಂಬೆಡ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಫೇಸ್ ಬುಕ್ ಕಂಪನಿ ವಕ್ತಾರರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

SCROLL FOR NEXT