ವಾಣಿಜ್ಯ

ಲಾಕ್‌ಡೌನ್ ಟೈಮಲ್ಲಿ 8 ದಶಕಗಳ ಗರಿಷ್ಠ ಮಾರಾಟ ಕಂಡ ಪಾರ್ಲೆ ಜಿ!

Raghavendra Adiga

ನವದೆಹಲಿ: ಸಾಮಾನ್ಯ ಜನರ ಪಾಲಿಗೆ ಅತ್ಯಂತ ಪ್ರಿಯವಾದ ಪಾರ್ಲೆ ಜಿ ಬಿಸ್ಕೆಟ್ ಈ ಲಾಕ್ ಡೌನ್ ವೇಳೆ ತನ್ನ ಎಂಬತ್ತು ವರ್ಷಗಳ ದಾಖಲೆಯನ್ನು ಮುರಿದಿದೆ. ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಬಿಸ್ಕತ್ತುಗಳ ಮಾರಾಟ ಕಂಡು ಸಂಸ್ಥೆ ವಿಶಿಷ್ಟ ಸಾಧನೆ ಮಾಡಿದೆ.

ಪಾರ್ಲೆ ಜಿ ಲೇಬಲ್‌ನ ಸೃಷ್ಟಿಯಾದ  ಪಾರ್ಲೆ ಉತ್ಪನ್ನಗಳು ತಮ್ಮ ನಿರ್ದಿಷ್ಟ ಮಾರಾಟ ಅಂಕಿಅಂಶಗಳನ್ನು ತೋರಿಸಲು ನಿರಾಕರಿಸಿದರೂ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಂಪನಿಯು ತಮ್ಮ ಎಂಟು ದಶಕಗಳಲ್ಲಿ ತಮ್ಮ ಅತ್ಯುತ್ತಮ ಮಾರಾಟ ಕಂಡಿದೆ ಎಂದು ದೃಢಪಡಿಸಿದ್ದಾರೆ.

"ನಾವು ನಮ್ಮ ಒಟ್ಟಾರೆ ಮಾರುಕಟ್ಟೆ ಪಾಲನ್ನು ಸುಮಾರು 5% ರಷ್ಟು ಹೆಚ್ಚಿಸಿದ್ದೇವೆ ... ಮತ್ತು ಈ ಬೆಳವಣಿಗೆಯ 80–90% ರಷ್ಟು ಪಾರ್ಲೆಜಿ ಮಾರಾಟದಿಂದ ಬಂದಿದೆ. ಇದು ಹೊಸ ದಾಖಲೆಯಾಗಿದೆ" ಎಂದು ಪಾರ್ಲೆ ಉತ್ಪನ್ನಗಳ ವಿಭಾಗದ ಮುಖ್ಯಸ್ಥ ಮಾಯಾಂಕ್ ಷಾ ಉಲ್ಲೇಖಿಸಿದ್ದಾರೆ.

ಕೋವಿಡ್ -19 ಲಾಕ್‌ಡೌನ್ ಹಂತದಲ್ಲಿ, ಜನರು ಸುಲಭ ಮತ್ತು ಸರಳವಾದ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸುವ ಉದ್ದೇಶದಿಂದ ದೇಶದಲ್ಲಿ ಸಾಕಷ್ಟು ಬೆಲೆಯ ಬಿಸ್ಕಟ್‌ಗಳ ಮಾರಾಟವು ಭಾರಿ ಪ್ರಮಾಣದಲ್ಲಿ ಏರಿತು."ಗ್ರಾಹಕರು ಲಭ್ಯವಿರುವ ಯಾವುದೇ ಬಿಸ್ಕೆಟ್ ಗಳನ್ನು ತೆಗೆದುಕೊಳ್ಳುತ್ತಿದ್ದರು.  ಲಾಕ್‌ಡೌನ್ ಹಂತದಲ್ಲಿ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಉತ್ಪನ್ನದ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲು ಕಂಪನಿಯು ತನ್ನ ವಿತರಣಾ ಮಾರ್ಗಗಳನ್ನು 7 ದಿನಗಳಲ್ಲಿ ಮರುಸ್ಥಾಪಿಸಿದೆ.ಲಾಕ್‌ಡೌನ್ ಹಂತದಲ್ಲಿ ಕಂಪನಿಯು ಅಳವಡಿಸಿಕೊಂಡ ತಂತ್ರಗಳ ಕುರಿತು ಮಾತನಾಡಿದ ಮಾಯಾಂಕ್ ಷಾ: "ಲಾಕ್‌ಡೌನ್ ಸಮಯದಲ್ಲಿ, ಪಾರ್ಲೆ-ಜಿ ಅನೇಕರಿಗೆ ಉತ್ತಮ ಹಾಗೂ ಸುಲಭವಾದ ಆಹಾರವಾಗಿತ್ತು. ಸಾಮಾನ್ಯವಾಗಿ ಬೇರೆ ಏನೂ ಸಿಕ್ಕದವರು - ಪಾರ್ಲೆ-ಜಿ ಖರೀದಿಸಿ ತಿನ್ನುತ್ತಿದ್ದರು"

ಪಾರ್ಲೆ ಪ್ರಾಡಕ್ಟ್ಸ್ ಪ್ರಸ್ತುತ ಭಾರತದಾದ್ಯಂತ 130 ಕಾರ್ಖಾನೆಗಳನ್ನು ಹೊಂದಿದ್ದು, ಅವುಗಳಲ್ಲಿ 120 ನಿರಂತರವಾಗಿ ಉತ್ಪಾದನೆ ನಡೆಸುತ್ತಿದೆ. ಪಾರ್ಲೆ-ಜಿ ಬ್ರಾಂಡ್ ‘ಪ್ರತಿ ಕೆ.ಜಿ.ಗೆ 100 ರೂ.ಗಿಂತ ಕಡಿಮೆ’ ಕೈಗೆಟುಕುವ ಬೆಲೆಗೆ ಸಿಕ್ಕುತ್ತದೆ.ಇದು ಒಟ್ಟು ಉದ್ಯಮದ ಆದಾಯದ ಮೂರನೇ ಒಂದು ಭಾಗವನ್ನು ಹೊಂದಿದೆ ಮತ್ತು ಮಾರಾಟವಾದ ಪರಿಮಾಣದ 50% ಕ್ಕಿಂತ ಹೆಚ್ಚು ಆಗಿದೆ.

SCROLL FOR NEXT