ವಾಣಿಜ್ಯ

ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲ ವಹಿವಾಟು: ಸೆನ್ಸೆಕ್ಸ್ 552.09 ಅಂಕ ಪತನ

Srinivas Rao BV

ಮುಂಬೈ: ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆ ಬ್ಯಾಂಕಿಂಗ್, ರಿಯಾಲ್ಟಿ, ಹಣಕಾಸು, ಬಂಡವಾಳ ಸರಕು ಮತ್ತು ಗ್ರಾಹಕ ಬಳಕೆ ವಸ್ತುಗಳ ಷೇರುಗಳಲ್ಲಿ ಭಾರೀ ಮಾರಾಟ ಕಂಡು ಬಂದ ಹಿನ್ನೆಲೆಯಲ್ಲಿ  ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 552.09 ಅಂಕ ಪತನಗೊಂಡು 33,228.80ಕ್ಕೆ ಇಳಿದಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 159.20 ಅಂಕ ಇಳಿಕೆ ಕಂಡು 9,813.70 ಕ್ಕೆ ತಲುಪಿದೆ.

ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 33,670.55 ಹಾಗೂ 32,923.74ರಲ್ಲಿತ್ತು.
 

SCROLL FOR NEXT