ವಾಣಿಜ್ಯ

ಬ್ರಿಟಿಷ್‌ ಕೈಗಾರಿಕಾ ಮಹಾ ಒಕ್ಕೂಟದ ಅಧ್ಯಕ್ಷರಾಗಿ ಭಾರತೀಯ ಮೂಲದ ಪೀರ್ ಕರಣ್ ಬಿಲಿಮೋರಿಯಾ ಆಯ್ಕೆ 

Raghavendra Adiga

ಲಂಡನ್: ಭಾರತ ಸಂಜಾತ ಬ್ರಿಟನ್ ಉದ್ಯಮಿ ಲಾರ್ಡ್‌ ಕರಣ್‌ ಬಿಲಿಮೊರಿಯಾ ಯುಕೆ 190,000 ಕ್ಕೂ ಹೆಚ್ಚು ಬ್ಯುಸಿನೆಸ್ ಗಳನ್ನು ಪ್ರತಿನಿಧಿಸುವ ಲಾಭರಹಿತ ಸದಸ್ಯತ್ವ ಸಂಘಟನೆ ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿ(ಬ್ರಿಟಿಷ್‌ ಕೈಗಾರಿಕಾ ಮಹಾ ಒಕ್ಕೂಟ) ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೋಬ್ರಾ ಬಿಯರ್ ಸಂಸ್ಥಾಪಕ ಉದ್ಯಮಿ ಭಾರತ ಮೂಲದ ಬಿಲಿಮೊರಿಯಾ  ಕಳೆದ ವರ್ಷಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿ (ಸಿಬಿಐ) ಯ ಉಪಾಧ್ಯಕ್ಷರಾಗಿದ್ದರು ಮತ್ತು ಮಂಗಳವಾರ ನಡೆದ ಸಂಘಟನೆಯಸಭೆಯಲ್ಲಿ "ಅಗಾಧ ಬಹುಮತ" ದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

"ಯುಕೆ ಬ್ಯ್ಸಿನೆಸ್ ಗಾಗಿ  ಮಹತ್ವದ ಸಮಯದಲ್ಲಿ ಸಿಬಿಐ ಅಧ್ಯಕ್ಷರಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ನಮ್ಮ ದೇಶದ ನಾಲ್ಕು ರಾಷ್ಟ್ರಗಳು ಮಹತ್ವಾಕಾಂಕ್ಷೆಯ ಆರ್ಥಿಕ ಚೇತರಿಕೆ ಯೋಜನೆಯನ್ನು ಕೈಗೊಳ್ಳುತ್ತಿದ್ದಂತೆ, ನಾವು ಎಲ್ಲರನ್ನೂ ಒಳಗೊಂಡಂತೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ನಾನು ತನ್ನಿಂದಾದ ಎಲ್ಲವನ್ನು  ಮಾಡುತ್ತೇನೆ. ಸುಸ್ಥಿರ ಬೆಳವಣಿಗೆ ನನ್ನ ಗುರಿಯಾಗಿದೆ" ಬಿಲಿಮೊರಿಯಾ  ಹೇಳಿದ್ದಾರೆ.

ಬಿಲಿಮೊರಿಯಾ  ಅವರನ್ನು ಸಿಬಿಐ ಯುಕೆ ಯ ಪ್ರಮುಖ ಉದ್ಯಮಿಗಳಲ್ಲಿ ಒಬ್ಬನೆಂದು ವಿವರಿಸಿದೆ, ಅವರು ಯುಕೆ-ಇಂಡಿಯಾ ಬಿಸಿನೆಸ್ ಕೌನ್ಸಿಲ್ ನ ಸ್ಥಾಪಕ ಅಧ್ಯಕ್ಷರಾಗಿದ್ದರು.2014 ರಲ್ಲಿ ಅವರನ್ನು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ 7 ನೇ ಕುಲಪತಿಯಾಗಿ ನೇಮಿಸಲಾಯಿತು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜಡ್ಜ್ ಬ್ಯುಸಿನೆಸ್ ಸ್ಕೂಲ್ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಮತ್ತು 14 ವರ್ಷಗಳಿಂದ ಹೌಸ್ ಆಫ್ ಲಾರ್ಡ್ಸ್ ನಲ್ಲಿ ಸ್ವತಂತ್ರ ಕ್ರಾಸ್ಬೆಂಚ್ ಪೀರ್ ಆಗಿದ್ದಾರೆ.

"ಲಾರ್ಡ್ ಬಿಲಿಮೋರಿಯಾ ಸಿಬಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆ ಖುಷಿ ತಂದಿದೆ. ಅವರ ಅನುಭವ, ಜಾಗತಿಕ ದೃಷ್ಟಿಕೋನ ಮತ್ತು ಸ್ಥಿರತೆ ಸಿಬಿಐ ಮತ್ತು ಯುಕೆ ವ್ಯಾಪಾರ ಸಮುದಾಯಕ್ಕೆ ಅಮೂಲ್ಯವಾದುದು ಎಂದು ಸಾಬೀತುಪಡಿಸುತ್ತದೆ" ಎಂದು ಸಿಬಿಐ ಮಹಾನಿರ್ದೇಶಕ ಡೇಮ್ ಕ್ಯಾರೊಲಿನ್ ಫೇರ್‌ಬೈರ್ನ್ ಹೇಳಿದ್ದಾರೆ. 

ಸಿಬಿಐ ಉಪಾಧ್ಯಕ್ಷರಾಗುವ ಜಾನ್ ಅಲನ್ ಅವರಿಂದ ಅಧ್ಯಕ್ಷ ಹುದ್ದೆಯನ್ನು ಬಿಲಿಮೋರಿಯಾ ವಹಿಸಿಕೊಂಡಿದ್ದಾರೆ.
 

SCROLL FOR NEXT