ವಾಣಿಜ್ಯ

ಪಿಎಂಸಿ ಬ್ಯಾಂಕ್ ಗಳ ಹಣ ಹಿಂಪಡೆಯುವ ಮಿತಿ 50 ಸಾವಿರದಿಂದ 1 ಲಕ್ಷ ರೂ ಗಳವರೆಗೆ ಏರಿಸಿದ ಆರ್ ಬಿಐ

Srinivas Rao BV

ಮುಂಬೈ: ವಂಚನೆಯ ಆರೋಪ ಎದುರಿಸುತ್ತಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಗಳ(ಪಿಎಂಸಿ) ಹಣ ಹಿಂಪಡೆಯುವ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೇರಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆದೇಶ ಹೊರಡಿಸಿದೆ.    

ಆದರೆ, ಬ್ಯಾಂಕ್ ಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು 2020ರ ಡಿಸೆಂಬರ್ 20ರವರೆಗೆ ವಿಸ್ತರಿಸಲಾಗಿದೆ. ಬ್ಯಾಂಕ್ ನ ಲಿಕ್ವಿಡಿಟಿ ಪರಿಸ್ಥಿತಿ ಹಾಗೂ ಠೇವಣಿದಾರರಿಗೆ ವಾಪಸ್ ಹಣ ನೀಡುವ ಬ್ಯಾಂಕ್ ನ ಸಾಮರ್ಥ್ಯವನ್ನು ಪರಿಸೀಲಿಸಿದ ನಂತರ, ಕೋವಿಡ್-19 ನ ಸಂಕಷ್ಟದ ಹಿನ್ನೆಲೆಯಲ್ಲಿ ಗ್ರಾಹಕರು ಹಣ ಹಿಂಪಡೆಯಲು ಎದುರಿಸುತ್ತಿರುವ ಸಮಸ್ಯೆ ಗಮನದಲ್ಲಿರಿಸಿಕೊಂಡು ಹಣ ಹಿಂಪಡೆಯುವ ಮಿತಿಯನ್ನು 1ಲಕ್ಷ ರೂ.ಗಳವರೆಗೆ ಏರಿಸಲಾಗಿದೆ.

ಹಗರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಗಳಿಂದ ಹಿಂತೆಯುವ ಮೊತ್ತವನ್ನು 10,000 ರೂಪಾಯಿಗಳಿಗೆ ನಿಗದಿಪಡಿಸಲಾಗಿತ್ತು. ನಂತರದ ದಿನಗಳಲ್ಲಿ 50,000 ಕ್ಕೆ ಏರಿಕೆ ಮಾಡಲಾಗಿತ್ತು. ಈ ಹಿಂದಿನ 50,000 ರೂಪಾಯಿಗಳೂ ಸೇರಿದಂತೆ ಈಗ ಬ್ಯಾಂಕ್ ನ ಓರ್ವ ಠೇವಣಿದಾರನಿಗೆ ಒಟ್ಟಾರೆಯಾಗಿ 1 ಲಕ್ಷ ರೂಪಾಯಿ ಹಣ ಹಿಂತೆಗೆಯಲು ಅವಕಾಶ ಮಾಡಿಕೊಡಲಾಗಿದೆ.
ಆರ್ ಬಿಐ ನ ಈ ಕ್ರಮ, ಬ್ಯಾಂಕ್ ನ ಶೇ.84 ರಷ್ಟು ಠೇವಣಿದಾರರು ತಮ್ಮ ಖಾತೆಯಿಂದ ಸಂಪೂರ್ಣವಾಗಿ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿದೆ.

SCROLL FOR NEXT