ವಾಣಿಜ್ಯ

ಚೀನಾ, ಕೊರಿಯಾದ ಕೆಮಿಕಲ್ ಗಳ ಮೇಲಿನ ಆಮದು ತಡೆಗೆ ಸುಂಕ ವಿಧಿಸಲಿರುವ ಭಾರತ!

Srinivas Rao BV

ನವದೆಹಲಿ: ಚೀನಾ, ಕೊರಿಯಾಗಳಿಂದ ಕೆಮಿಕಲ್ ಗಳ ಆಮದು ತಡೆಗೆ ಭಾರತ ಕಠಿಣ ಕ್ರಮ ಕೈಗೊಳ್ಳಲಿದ್ದು, ಆಮದು ತಡೆ ಸುಂಕ ವಿಧಿಸುವ ಸಾಧ್ಯತೆ ಇದೆ.

ಎಲೆಕ್ಟ್ರಿಕಲ್,ಎಲೆಕ್ಟ್ರಾನಿಕ್,ಮೆಕ್ಯಾನಿಕಲ್ ಹಾಗೂ ಕೆಮಿಕಲ್ ವಿಭಾಗಗಳಲ್ಲಿ ಬಳಕೆಯಾಗುವ ರಾಸಾಯನಿಕ ಚೀನಾ ಹಾಗೂ ಕೊರಿಯಾದಿಂದ ಅಗ್ಗದ ದರದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದು ಸ್ಥಳಿಯ ಕಂಪನಿಗಳ ಹಿತಾಸಕ್ತಿಗೆ  ಧಕ್ಕೆಉಂಟುಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಹಿತಾಸಕ್ತಿ ಕಾಪಾಡಲು ಆಂಟಿ ಸರ್ಕಂವೆನ್ಷನ್ (ಆಮದು ತಡೆಯಲು) ಸುಂಕವನ್ನು ಜಾರಿಗೊಳಿಸುವ ಕ್ರಮಕ್ಕೆ ಭಾರತ ಸರ್ಕಾರ ಮುಂದಾಗಿದೆ.

ಗುಜರಾತ್ ನ ಫ್ಲ್ಯೂರೋ ಕೆಮಿಕಲ್ಸ್ ಲಿಮಿಟೆಡ್ ದೇಶಿಯ ಸಂಸ್ಥೆಗಳ ಪರವಾಗಿ ವಾಣಿಜ್ಯ ಸಚಿವಾಲಯದ ತನಿಖಾ ವಿಭಾಗ (ಡಿಜಿಟಿಆರ್) ಗೆ ಆಮದು ತಡೆಗೆ ವಿಧಿಸಲಾಗುತ್ತಿದ್ದ anti-dumping  ಸುಂಕದಿಂದ ಚೀನಾದ ಕೆಮಿಕಲ್ ಪಾಲಿಟೆಟ್ರಾಫ್ಲುರೋಥೆಲಿನ್ (ಪಿಟಿಎಫ್ಇ) ಗಳನ್ನು ಕೈಬಿಟ್ಟಿರುವುದರ ಬಗ್ಗೆ ತನಿಖೆ ನಡೆಸಿ ಆಮದು ಸುಂಕ ವಿಧಿಸಬೇಕೆಂದು ಹೇಳಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿರುವ ಸಂಬಂಧಪಟ್ಟ ಇಲಾಖೆ ಸುಂಕ ವಿಧಿಸಲು ಮುಂದಾಗಿದೆ. 

ಯಾವುದೇ ವಿದೇಶಿ ಸಂಸ್ಥೆಗಳು ಅಲ್ಲಿನ ದೇಶಿಯ ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ ರಫ್ತು ಮಾಡಿದರೆ ಅವುಗಳನ್ನು ಡಂಪಿಂಗ್ ಎನ್ನಲಾಗುತ್ತದೆ. ಇದರಿಂದ ಆಮದು ಮಾಡಿಕೊಳ್ಳುವ ದೇಶದಲ್ಲಿರುವ ಸಂಸ್ಥೆಗಳ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ. ಪಾಲಿಟೆಟ್ರಾಫ್ಲುರೋಥೆಲಿನ್ (ಪಿಟಿಎಫ್ಇ) ವಿಚಾರದಲ್ಲಿ ಭಾರತೀಯ ಕಂಪನಿಗಳಿಗೆ ಚೀನಾ ಹಾಗೂ ಕೊರಿಯಾಗಳಿಂದ ಇದೇ ರೀತಿಯಾಗುತ್ತಿತ್ತು.

SCROLL FOR NEXT