ಭಾರತ-ಚೀನಾ ಧ್ವಜ 
ವಾಣಿಜ್ಯ

ಮುಯ್ಯಿಗೆ ಮುಯ್ಯಿ: ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಪ್ರತಿಯಾಗಿ ಭಾರತದ ಶಿಪ್ಮೆಂಟ್ ಗಳಿಗೆ ನಿರ್ಬಂಧ

ಭಾರತ-ಚೀನಾ ಗಡಿ ಭಾಗದ ಸಮಸ್ಯೆ ಹೆಚ್ಚಾಗುತ್ತಿರುವಂತೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು, ಅಭಿಯಾನ ಭಾರತ ದೇಶದಲ್ಲಿ ಜೋರಾಗುತ್ತಿದೆ, ಚೀನಾ ಮೂಲದ ಸಾಗಣೆ ಹಡಗನ್ನು ದೇಶೀಯ ಬಂದರುಗಳಲ್ಲಿ ತಡೆಹಿಡಿದಿರುವ ಭಾರತದ ಕ್ರಮಕ್ಕೆ ಪ್ರತಿಯಾಗಿ ಚೀನಾ ಕೂಡ ಭಾರತ ಮೂಲದ ಸಾಗಾಟ ಹಡಗುಗಳನ್ನು ಹಾಂಕಾಂಗ್ ನಲ್ಲಿ ತಡೆಹಿಡಿಯುತ್ತಿದೆ.

ನವದೆಹಲಿ:ಭಾರತ-ಚೀನಾ ಗಡಿ ಭಾಗದ ಸಮಸ್ಯೆ ಹೆಚ್ಚಾಗುತ್ತಿರುವಂತೆ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗು, ಅಭಿಯಾನ ಭಾರತ ದೇಶದಲ್ಲಿ ಜೋರಾಗುತ್ತಿದೆ, ಚೀನಾ ಮೂಲದ ಸಾಗಣೆ ಹಡಗನ್ನು ದೇಶೀಯ ಬಂದರುಗಳಲ್ಲಿ ತಡೆಹಿಡಿದಿರುವ ಭಾರತದ ಕ್ರಮಕ್ಕೆ ಪ್ರತಿಯಾಗಿ ಚೀನಾ ಕೂಡ ಭಾರತ ಮೂಲದ ಸಾಗಾಟ ಹಡಗುಗಳನ್ನು ಹಾಂಕಾಂಗ್ ನಲ್ಲಿ ತಡೆಹಿಡಿಯುತ್ತಿದೆ.

ಚೀನಾ ಭಾರತದ ಕ್ರಮಕ್ಕೆ ಪ್ರತಿಯಾಗಿ ಮುಯ್ಯಿಗೆ ಮುಯ್ಯಿ ಎಂಬಂತೆ ವರ್ತಿಸುತ್ತಿದೆ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೊರ್ಟ್ ಆರ್ಗನೈಸೇಷನ್ ((ಎಫ್ಐಇಒ) ಅಧ್ಯಕ್ಷ ಎಸ್ ಕೆ ಸರಾಫ್ ತಿಳಿಸಿದ್ದಾರೆ. ಇದು ವಸ್ತುಗಳ ರವಾನೆ ತೆರವು ವಿಳಂಬಕ್ಕೆ ಕಾರಣವಾಗುತ್ತಿದೆ. ಎಫ್‌ಐಇಒ ಈ ವಿಷಯವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ತಿಳಿಸಿದ್ದು, ಚೀನಾದಿಂದ ಬರುವ ವಸ್ತುಗಳನ್ನು ಪರಿಶೀಲಿಸಿ ಅವುಗಳಿಗೆ ತೆರವು ಅನುಮತಿ ನೀಡುವುದಕ್ಕೆ ವಿಳಂಬವಾಗುತ್ತಿದೆ. ಅಲ್ಲದೆ ಆಮದು ವೆಚ್ಚ ಕೂಡ ಹೆಚ್ಚಾಗುತ್ತಿದೆ ಎಂದು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಅನೂಪ್ ವಧವಾನ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಇವೆಲ್ಲಾ ಹಠಾತ್ತನೆ ಆಗಿರುವ ಬೆಳವಣಿಗೆಗಳಾಗಿರುವುದರಿಂದ ಉದ್ಯಮ ಮೇಲೆ ಭಾರೀ ಹೊಡೆತ ಬೀಳುತ್ತಿದೆ. 200ಕ್ಕೂ ಹೆಚ್ಚು ಕೈಗಾರಿಕೆಗಳ ಉದ್ಯಮ ಮೇಲೆ ಕಳೆದ ತಿಂಗಳಿನಿಂದ ಪರಿಣಾಮ ಬೀರಿದೆ. ಈ ಬಗ್ಗೆ ಕೂಡಲೇ ಹಣಕಾಸು ಸಚಿವಾಲಯ ಮಧ್ಯೆ ಪ್ರವೇಶಿಸಬೇಕೆಂದು ಎಫ್ಐಇಒ ಕೋರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!