ವಾಣಿಜ್ಯ

ಪ್ಯಾಕೇಜಿಂಗ್ ನಲ್ಲಿ ಅಮೇಜಾನ್ ಇಂಡಿಯಾ ಈಗ ಏಕಬಳಕೆ ಪ್ಲಾಸ್ಟಿಕ್ ಮುಕ್ತ! 

Srinivas Rao BV

ಬೆಂಗಳೂರು: ಪ್ಯಾಕೇಜಿಂಗ್ ನಲ್ಲಿ ಅಮೇಜಾನ್ ಇಂಡಿಯಾ ಈಗ ಏಕಬಳಕೆ ಪ್ಲಾಸ್ಟಿಕ್ ಮುಕ್ತವಾಗಿದೆ.

ಜೂ.29 ರಂದು ಅಮೇಜಾನ್ ಇಂಡಿಯಾ ದೇಶದಲ್ಲಿ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಮುಕ್ತವಾಗಿರುವುದನ್ನು ಘೋಷಿಸಿದೆ. ಹಂತ ಹಂತವಾಗಿ ಏಕಬಳಕೆ ಪ್ಲಾಸ್ಟಿಕ್ ನಿಂದ ಮುಕ್ತಿಪಡೆಯುವುದಕ್ಕೆ 2019 ರ ಸೆಪ್ಟೆಂಬರ್ ನಲ್ಲಿ ಸಂಸ್ಥೆ ತೀರ್ಮಾನಿಸಿ 2020 ರ ಜೂನ್ ತಿಂಗಳಿಗೆ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗುವ ಗುರಿ ಹೊಂದಿತ್ತು.

ಈ ಪ್ರಕಾರ 2019 ರ ಡಿಸೆಂಬರ್ ನಲ್ಲಿ ಮೊದಲ ಕ್ರಮ ಕೈಗೊಂಡಿದ್ದ ಅಮೇಜಾನ್ ಇಂಡಿಯಾ, ಪ್ಯಾಕಿಂಗ್ ಮಾಡುವುದಕ್ಕೆ ಬಳಕೆ ಮಾಡುತ್ತಿದ್ದ ಬಬಲ್ ಕವರ್ ಗಳು, ಏರ್ ಪಿಲ್ಲೋಗಳ ಬದಲಿಗೆ ಪೇಪರ್ ಕುಶನ್ ಬಳಕೆಯನ್ನು ಪ್ರಾರಂಭಿಸಿತ್ತು. ಈ ವರ್ಷಾರಂಭದಲ್ಲಿ ಶೇ.100 ರಷ್ಟು ಪ್ಲಾಸ್ಟಿಕ್ ಮುಕ್ತ, ಜೈವಿಕ ವಿಘಟನೀಯ ಕಾಗದದ ಟೇಪ್ ನ್ನು ಬಳಕೆಗೆ ಚಾಲನೆ ನೀಡಲಾಗಿತ್ತು. 'ಅಮೇಜಾನ್ ಫುಲ್ಫಿಲ್ಮೆಂಟ್ ಕೇಂದ್ರಗಳಿಂದ ಗ್ರಾಹಕರಿಗೆ ತಲುಪುವ ವಸ್ತುಗಳ ಪ್ಯಾಕಿಂಗ್ ವ್ಯವಸ್ಥೆ ಮರುಬಳಕೆ ಮಾಡಬಹುದಾಗಿದೆ' ಎಂದು ಸಂಸ್ಥೆ ತಿಳಿಸಿದೆ.

SCROLL FOR NEXT