ವಾಣಿಜ್ಯ

ಸತತ 4ನೇ ಬಾರಿ 1 ಲಕ್ಷ ಕೋಟಿ ದಾಟಿದ ಜಿಎಸ್ ಟಿ, ಫೆಬ್ರವರಿಯಲ್ಲಿ 1.05 ಲಕ್ಷ ಕೋಟಿ ರೂ. ಸಂಗ್ರಹ

Lingaraj Badiger

ನವದೆಹಲಿ: ತೀವ್ರ ಆರ್ಥಿಕ ಹಿಂಜರಿತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕೇಂದ್ರ ಸರ್ಕಾರಕ್ಕೆ ಸರಕು ಮತ್ತು ಸೇವಾ ತೆರಿಗೆ - ಜಿ.ಎಸ್.ಟಿ ಸಂಗ್ರಹದಲ್ಲಿ ಹೆಚ್ಚಳವಾಗಿರುವುದು ಆಶಾಭಾವನೆ ಮೂಡಿಸಿದಂತಾಗಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ಫೆಬ್ರವರಿ ಮಾಹೆಯಲ್ಲಿ ಸುಮಾರು 1.05 ಲಕ್ಷ ಕೋಟಿ ರೂ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಂಗ್ರಹಿಸಿದ್ದ ಜಿಎಸ್ ಟಿ ಮೊತ್ತಕ್ಕಿಂತ ಶೇಕಡಾ ಎಂಟರಷ್ಟು ಅಧಿಕವಾಗಿದೆ ಮತ್ತು ನಾಲ್ಕನೆ ಬಾರಿ ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.

ಒಟ್ಟು ಆದಾಯದ ಪೈಕಿ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ ಟಿ)ಸುಮಾರು ೨೦ ಸಾವಿರ ಕೋಟಿ ರೂಪಾಯಿ, ರಾಜ್ಯ ಸರಕು ಮತ್ತು ಸೇವಾ ತೆರಿಗೆ(ಎಸ್ ಜಿಎಸ್ ಟಿ) ೨೭ ಸಾವಿರ ಕೋಟಿ ರೂಪಾಯಿ ಮತ್ತು ಏಕೀಕೃತ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್ ಟಿ) ೪೮ ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿದೆ.

SCROLL FOR NEXT