ವಾಣಿಜ್ಯ

ಕೊರೋನಾ ಎಫೆಕ್ಟ್: ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ!

Srinivas Rao BV

ನವದೆಹಲಿ: ಕೊರೋನಾ ವೈರಸ್ ಪ್ರಭಾವ ಷೇರುಮಾರುಕಟ್ಟೆಯಷ್ಟೇ ಅಲ್ಲದೇ ಹಳದಿ ಲೋಹದ ಮೇಲೂ ಬೀರಿದೆ. 

ಎರಡು ದಿನಗಳಲ್ಲಿ ಚಿನ್ನದ ದರ 2,200 ರೂಪಾಯಿ ಕುಸಿತ ಕಂಡಿದ್ದು, ಈಗ 10 ಗ್ರಾಂ ಚಿನ್ನಕ್ಕೆ 42,600 ರೂಪಾಯಿಗಳಾಗಿದೆ. ಕೊರೋನಾ ವೈರಸ್ ಹರಡುತ್ತಿರುವುದರ ಪರಿಣಾಮ ಆರ್ಥಿಕತೆ ಮೇಲೆ ಉಂಟಾಗಿದ್ದು, ಷೇರು ಮಾರುಕಟ್ಟೆ ಹಾಗೂ ಸರಕುಗಳ ಬೆಲೆಯಲ್ಲೂ ಕುಸಿತ ಕಂಡುವಂದಿದೆ.   

ಇದೇ ವೇಳೆ ಬೆಳ್ಳಿ ದರದಲ್ಲೂ ಇಳಿಕೆಯಾಗಿದ್ದು, ಮಾ.13 ರಂದು ಪ್ರತಿ ಕೆ.ಜಿಗೆ 45,704 ರೂಪಾಯಿ ಇದ್ದ ಬೆಳ್ಳಿ ಬೆಲೆ ಒಂದೇ ದಿನದಲ್ಲಿ 44,130 ರೂಪಾಯಿಯಷ್ಟಾಗಿದೆ (1,600 ರೂಪಾಯಿ ಪ್ರತಿ ಕೆ.ಜಿಗೆ ಇಳಿಕೆಯಾಗಿದೆ). 

ಅಮೆರಿಕ ಮಾರುಕಟ್ಟೆಯಲ್ಲೂ ಚಿನ್ನ ಮೂರನೇ ದಿನವೂ ಕುಸಿತ ಕಂಡಿದೆ. 

SCROLL FOR NEXT