ವಾಣಿಜ್ಯ

ಕೊರೋನಾ ವೈರಸ್ ನಿರ್ವಹಣಾ ನಿಧಿಗೆ 150 ಕೋಟಿ ರೂ ದೇಣಿಗೆ ನೀಡಿದ ಐಟಿಸಿ

Srinivasamurthy VN

ನವದೆಹಲಿ: ಕೊರೋನಾ ವೈರಸ್ ನಿರ್ವಹಣಾ ನಿಧಿಗೆ ಖ್ಯಾತ ಉದ್ಯಮ ಸಂಸ್ಥೆ ಐಟಿಸಿ 150 ಕೋಟಿ ರೂಗಳ ನಿರಾಳ ದೇಣಿಗೆ ನೀಡಿದೆ.

ಐಟಿಸಿ ಸಂಸ್ಥೆಯ ಅಧ್ಯಕ್ಷ ರಾಜೀವ್ ಪುರಿ ಅವರು ಈ ಕುರಿತಂತೆ ಹೇಳಿಕೆ ನೀಡಿದ್ದು, ತಮ್ಮ ಸಂಸ್ಥೆ ಪ್ರಧಾನ ಮಂತ್ರಿಗಳ ಕೋವಿಡ್ 19 ನಿರ್ವಹಣಾ ನಿಧಿಗೆ 150 ಕೋಟಿ ರೂಗಳ ದೇಣಿಗೆ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. 

ದೇಶದಲ್ಲಿ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದು ಅದನ್ನು ನಿಯಂತ್ರಿಸುವ ಅಥವಾ ತಡೆಗಟ್ಟುವ ನಿಟ್ಟಿನಲ್ಲಿ ಪರಸ್ಪರ ನೆರವಿನ ಹಸ್ತ ಅತ್ಯಗತ್ಯ. ಕಾರ್ಪೋರೇಟ್ ವಲಯದಲ್ಲಿರುವ ನಮ್ಮ ದೇಣಿಗೆ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನೆರವಾಗಬಹುದು. ಇಂತಹ ಕಠಿಣ ಸಂದರ್ಭದಲ್ಲಿ  ಅಸಾಧಾರಣ ಕ್ರಮಗಳು ಮಾತ್ರ ನೆರವಿಗೆ ಬರುತ್ತದೆ. ಇದೇ ಕಾರಣಕ್ಕೆ ನಮ್ಮ ಐಟಿಸಿ ಸಂಸ್ಥೆ ನಮ್ಮ ಕೈಲಾದ ನೆರವು ನೀಡುತ್ತಿದೆ ಎಂದು ರಾಜೀವ್ ಪುರಿ ಹೇಳಿದ್ದಾರೆ.

ಇನ್ನು ಐಟಿಸಿ ಸಂಸ್ಥೆ ನೀಡಿರುವ ಹಣವನ್ನು ಸಮರ್ಥವಾಗಿ ಬಳಕೆ ಮಾಡುವ ಕುರಿತು ಕೇಂದ್ರ ಸರ್ಕಾರ ಆಶ್ವಾಸನೆ ನೀಡಿದ್ದು, ಗ್ರಾಮಾಂತರ ವೈದ್ಯಕೀಯ ಆರೋಗ್ಯ ಮತ್ತು ವೈದ್ಯಕೀಯ ಸಿಬ್ಬಂದಿಗಳ ಸುರಕ್ಷತೆಗೆ ಬಳಸಿಕೊಳ್ಳುವುದಾಗಿ ಹೇಳಿದೆ.

SCROLL FOR NEXT