ವಾಣಿಜ್ಯ

ಕೊರೋನಾ ಲಾಕ್‌ಡೌನ್: ಎಲ್‌ಪಿಜಿ ಕೊರತೆಯಿಲ್ಲ, ಶೇ.40 ಹೆಚ್ಚಿನ ಪೂರೈಕೆ ಸಾಧ್ಯ, ತೈಲ ಕಂಪನಿಗಳ ಭರವಸೆ

Raghavendra Adiga

ನವದೆಹಲಿ: ಅಡುಗೆ ಅನಿಲ ಪೂರೈಕೆ ಬಗೆಗೆ  ಗ್ರಾಹಕರ ಆತಂಕವನ್ನು ನಿವಾರಿಸುವ ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು, ಯಾವುದೇ ಇಂಧನದ ಕೊರತೆಯಿಲ್ಲ, ಅದರಲ್ಲೂ ವಿಶೇಷವಾಗಿ ಅಡುಗೆ ಅನಿಲದ ಕೊರತೆ ಉಂತಾಗುವುದಿಲ್ಲ.  ಗ್ರಾಹಕರಿಗೆ ತಮ್ಮ ಮನೆ ಬಾಗಿಲಿಗೆ ಅಡುಗೆ ಅನಿಲ ಸರಬರಾಜು ಆಗಲಿದೆ ಎಂದಿದೆ.

ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡುವ ಹೊರತಾಗಿಯೂಲಾಕ್ ಡೌನ್ ಬಳಿಕ ಸರಾಸರಿ, ಅಡುಗೆ ಅನಿಲದ ಸರಬರಾಜು ಕನಿಷ್ಠ 35-40ರಷ್ಟು ಹೆಚ್ಚಾಗಿದೆ ಎಂದು ಕಂಪನಿಗಳು ತಿಳಿಸಿವೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹರಡದಿರಲು ಬಾರತ  ಲಾಕ್‌ಡೌನ್ ವಿಧಿಸಿದಾಗಿನಿಂದ, ಎಲ್ಲಾ ತೈಲ ಉತ್ಪನ್ನಗಳ, ವಿಶೇಷವಾಗಿ ಎಲ್‌ಪಿಜಿ ಸಿಲಿಂಡರ್‌ಗಳ, ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್, ನಿರಂತರವಾಗಿ ಅಡುಗೆ ಅನಿಲವನ್ನು ಕಾಯ್ದಿರಿಸುವ ಒತ್ತಡಕ್ಕೆ ಒಳಗಾಗಿದೆ.ಲಾಕ್‌ಡೌನ್‌ನ ಆರಂಭಿಕ ದಿನಗಳಲ್ಲಿ ಸಿಬ್ಬಂದಿ ಕೊರತೆಯ ಕಾರಣ ವಿತರಣೆಯಲ್ಲಿ ತುಸು ವಿಳಂಬವಾಗಿದೆ.  ಆದರೆ ಈಗ ಅದನ್ನು ಸಾಮಾನ್ಯ ಸ್ಥಿತಿಗೆ ತರಲಾಗಿದೆ. ಭಾನುವಾರಹಿಂದೂಸ್ತಾನ್ ಪೆಟ್ರೋಲಿಯಂನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಕುಮಾರ್ ಸುರಾನಾ, ಎಲ್‌ಪಿಜಿ ಕೊರತೆಯ ಬಗ್ಗೆ ಗ್ರಾಹಕರು ಚಿಂತೆ ಮಾಡಲು ಯಾವುದೇ ಅವಕಾಶವಿಲ್ಲ ಎಂದಿದ್ದಾರೆ. 

"ಯಾವುದೇ ತೈಲ ಉತ್ಪನ್ನಗಳ ಕೊರತೆಯಿಲ್ಲ ಎಂದು ನಾನು ಎಲ್ಲ ಸಾರ್ವಜನಿಕರಿಗೆ ಭರವಸೆ ನೀಡುತ್ತೇನೆ. ಎಲ್‌ಪಿಜಿಗೆ ಯಾವುದೇ ಕೊರತೆಯಿಲ್ಲ ಎಂದು ನಾನು ಹೆಚ್ಚು ಭರವಸೆ ನೀಡುತ್ತೇನೆ. ವಾಸ್ತವವಾಗಿ, ನಮ್ಮ ಎಲ್‌ಪಿಜಿ ಸ್ಥಾವರಗಳು ಯಾವುದೇ ಕೊರತೆಯನ್ನು ನಿಭಾಯಿಸಲು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಆದರೆ ಜನರು ಭಯಗೊಂಡು ಹೆಚ್ಚುವರಿ ಬುಕ್ಕಿಂಗ್ ಮಾಡಬಾರದೆಂದು ನಾನು ವಿನಂತಿಸುತ್ತೇನೆ."ಸುರಾನಾ ಹೇಳಿದರು.

ಎಚ್‌ಪಿಸಿಎಲ್ ಎಲ್‌ಪಿಜಿ ಸರಬರಾಜುಗಳನ್ನು ಹೇಗೆ ಹೆಚ್ಚಿಸಿದೆ ಎಂಬುದನ್ನು ವಿವರಿಸಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ ದೈನಂದಿನ ಸರಬರಾಜು ಕಂಪನಿದಿನಕ್ಕೆ 12 ಲಕ್ಷ ಸಿಲಿಂಡರ್‌ಗಳಿಂದ 15 ಲಕ್ಷಕ್ಕೆ ಏರಿದೆ.ಮುಂಬೈಯಲ್ಲಿ, ಎಚ್‌ಪಿಸಿಎಲ್ ಶನಿವಾರ ಶೇ 56 ರಷ್ಟು ಹೆಚ್ಚಿನ ಸಿಲಿಂಡರ್‌ಗಳನ್ನು ಸರಬರಾಜು ಮಾಡಿದೆ, 34,000 ರಿಂದ 51,000 ರವರೆಗೆ ಆಗಿದ್ದು ಪುಣೆಯಲ್ಲಿ 54 ಶೇಕಡಾ ಹೆಚ್ಚುವರಿ ಸಿಲೆಂಡರ್ ಪೂರೈಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT