ವಾಣಿಜ್ಯ

8 ಕೋಟಿ ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ! ಪ್ರಿ ಪೇಯ್ಡ್ ವ್ಯಾಲಿಡಿಟಿಯನ್ನು ಏ.17ರವರೆಗೆ ವಿಸ್ತರಿಸಿದ ಏರ್‌ಟೆಲ್ 

Raghavendra Adiga

ನವದೆಹಲಿ: ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ ಸೋಮವಾರ 8 ಕೋಟಿಗೂ ಹೆಚ್ಚು ಪ್ರಿ ಪೇಯ್ಡ್ ಗ್ರಾಹಕರ ವ್ಯಾಲಿಡಿಟಿಗಳನ್ನು  ಏಪ್ರಿಲ್ 17ರವರೆಗೆ ವಿಸ್ತರಿಸಿ ಆದೇಶಿಸಿದೆ. ಇಂತಹಾ ಪ್ರಿ ಪೇಯ್ಡ್ ಖಾತೆದಾರರಿಗೆ ಕಂಪನಿ 10 ರೂ. ಟಾಕ್ ಟೈಮ್ ಜಮೆ ಮಾಡಲಿದೆ.

ಏರ್‌ಟೆಲ್  2020 ರ ಏಪ್ರಿಲ್ 17 ರವರೆಗೆ 80 ಮಿಲಿಯನ್ ಗ್ರಾಹಕರಿಗೆ ಪ್ರಿ ಪೇಯ್ಡ್ ಪ್ಯಾಕ್ ವ್ಯಾಲಿಡಿಟಿಯನ್ನು ವಿಸ್ತರಿಸಿದೆ. ಈ ಯೋಜನೆಯ ಅನ್ವಯ ಎಲ್ಲಾ ಗ್ರಾಹಕರು ತಮ್ಮಮೊಬೈಲ್ ಸಂಖ್ಯೆಗಳಿಗೆ ಒಳಬರುವ ಕರೆಗಳನ್ನು ಸ್ವೀಕರಿಸುವುದನ್ನು ಮುಂದುವರಿಸಲಿದ್ದಾರೆ."ಏರ್‌ಟೆಲ್  ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ಇದರ ಲಾಭ ಬಳಕೆದಾರರಿಗೆ ಲಭ್ಯವಾಗಲಿದೆ ಎಂದುಕಂಪನಿ ಹೇಳಿದೆ.

"ಈ ಎಲ್ಲಾ 80 ಮಿಲಿಯನ್ ಗ್ರಾಹಕರ ಪ್ರಿ ಪೇಯ್ಡ್  ಖಾತೆಗಳಲ್ಲಿ ಹೆಚ್ಚುವರಿ 10 ರೂ. ಟಾಕ್ ಟೈಮ್ ಅನ್ನು ಏರ್‌ಟೆಲ್ ಕ್ರೆಡಿಟ್ ಮಾಡುತ್ತದೆ ಮತ್ತು ಕರೆಗಳನ್ನು ಮಾಡಲು ಅಥವಾ ಎಸ್ಎಂಎಸ್ ಕಳುಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಆದ್ದರಿಂದ ಅವರ ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರಲು ಸಾಧ್ಯವಾಗಲಿದೆ"

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್‌ಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸಹ ತಮ್ಮ ಪ್ರಿಪೇಯ್ಡ್ ಮೊಬೈಲ್ ಸೇವೆಗಳ ವ್ಯಾಲಿಡಿಟಿ ಅವಧಿಯನ್ನು  ಏಪ್ರಿಲ್ 20 ರವರೆಗೆ ವಿಸ್ತರಿಸಿದೆ 

ಇನ್ನು ಪ್ರಿ ಪೇಯ್ಡ್ ಗ್ರಾಹಕರಿಗೆ ನೀಡಲಾಗಿರುವ 10 ರೂ. ಕ್ರೆಡಿಟ್ ಕಂಪನಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಏರ್‌ಟೆಲ್ ಅಧಿಕಾರಿಯೊಬ್ಬರು ಹೇಳೀದ್ದಾರೆ. "ಕೋವಿಡ್ -19 ವಿರುದ್ಧ ಹೋರಾಡುವ  ಈ ಕಷ್ಟದ ಸಮಯದಲ್ಲಿ, ಎಲ್ಲಾ ಜನರು ಯಾವುದೇ ಅಡೆತಡೆಗಳಿಲ್ಲದೆ ಸಂಪರ್ಕ ಸಾಧಿಸಬೇಕಿದೆ. ಇದನ್ನು ಖಾತ್ರಿಪಡಿಸಿಕೊಳ್ಲಲು ಏರ್‌ಟೆಲ್ ಬದ್ಧವಾಗಿದೆ. ಮತ್ತು ಈ ಉದ್ದೇಶಕ್ಕಾಗಿ,ದಿನಗೂಲಿ ನೌಕರರ ಹಿತ ಮುಖ್ಯವಾಗಲಿದೆ. ಲಾಕ್-ಡೌನ್ ಕಾರಣದಿಂದಾಗಿ ಅವರ ಜೀವನವು  ಅತಂತ್ರವಾಗಿದೆ" ಏರ್ಟೆಲ್  ಮುಖ್ಯ ಮಾರುಕಟ್ಟೆ ಅಧಿಕಾರಿ ಶಶ್ವತ್ ಶರ್ಮಾ ಹೇಳಿದ್ದಾರೆ

SCROLL FOR NEXT