ವಾಣಿಜ್ಯ

ಕೊರೋನಾ ಎಫೆಕ್ಟ್: ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇ. 8 ರಿಂದ 10 ರಷ್ಟು ಇಳಿಕೆ ಸಾಧ್ಯತೆ

Sumana Upadhyaya

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಯಾವುದೇ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗದೆ ಕಳೆದ ಮಾರ್ಚ್ ತಿಂಗಳಿನಿಂದ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇಕಡಾ 8ರಿಂದ 19ರಷ್ಟು ಇಳಿಕೆಯಾಗಿದೆ.

ಟೆಕ್ ಎಆರ್ ಸಿ ತಂತ್ರಜ್ಞಾನ ವಿಶ್ಲೇಷಣೆ ಸಂಸ್ಥೆ ಈ ಗುಣಾತ್ಮಕ ಮೌಲ್ಯಮಾಪನ ಮಾಡಿದೆ. ಕಳೆದ ವರ್ಷ ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಮಾರಾಟ 145 ಮಿಲಿಯನ್ ನಿಂದ 158 ಮಿಲಿಯನ್ ಗೆ ಹೆಚ್ಚಳವಾಗಿತ್ತು. ಕಳೆದ ವರ್ಷ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಿತ್ತು. ಮೊದಲ ಸ್ಥಾನದಲ್ಲಿ ಚೀನಾ ದೇಶವಿತ್ತು.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸ್ಮಾರ್ಟ್ ಫೋನ್ ಗಳ ಉತ್ಪಾದನೆ ಕಳೆದೆರಡು ತಿಂಗಳಿನಿಂದ ತೀವ್ರ ಕುಸಿತ ಕಂಡುಬಂದಿದೆ.ಆಪಲ್ ಮತ್ತು ಒನ್ ಪ್ಲಸ್ ತಲಾ ಒಂದೊಂದು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಪ್ರಸಕ್ತ ವರ್ಷ ಉತ್ಪಾದಿಸಿದ್ದು ಇನ್ನೂ ಮಾರಾಟವಾಗಿಲ್ಲ.

ಕೊರೋನಾ ವೈರಸ್ ಆರ್ಥಿಕ ಕುಸಿತದಿಂದಾಗಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು ಬೇರೆ ಉದ್ಯಮ ಮತ್ತು ಕೈಗಾರಿಕೆಗಳ ಮೇಲೆ ಕೂಡ ಪರಿಣಾಮ ಬೀರಿದೆ. ಆದರೆ ದೀರ್ಘಾವಧಿಯಲ್ಲಿ ಸ್ಮಾರ್ಟ್ ಫೋನ್ ಗಳು ಗ್ರಾಹಕರಿಗೆ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿರುವುದರಿಂದ ಇದರ ಮಹತ್ವ ಹೆಚ್ಚಾಗಲಿದೆ ಎಂದು ಟೆಕ್ಎಆರ್ ಸಿ ವರದಿ ಹೇಳುತ್ತದೆ.

SCROLL FOR NEXT