ವಾಣಿಜ್ಯ

3 ಘಟಕಗಳಲ್ಲಿ ಉತ್ಪಾದನೆ ಆರಂಭಿಸಿದ ಹೀರೋ ಮೊಟೊಕಾರ್ಪ್

Sumana Upadhyaya

ನವದೆಹಲಿ: ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ ಹೀರೋ ಮೊಟೊಕಾರ್ಪ್ ಸೋಮವಾರ ಮೂರು ಉತ್ಪಾದನಾ ಘಟಕಗಳಲ್ಲಿ ತೆರೆದಿದೆ. ಹರ್ಯಾಣದ ಗುರುಗ್ರಾಮ್, ಧ್ಹರುಹೆರಾ ಮತ್ತು ಉತ್ತರಾಖಂಡ್ ನ ಹರಿದ್ವಾರದಲ್ಲಿ ಹಂತಹಂತವಾಗಿ ಉತ್ಪಾದನೆಗಳನ್ನು ಆರಂಭಿಸಲಿದೆ ಎಂದು ಹೀರೋ ಮೊಟೊಕಾರ್ಪ್ ಹೇಳಿಕೆಯಲ್ಲಿ ತಿಳಿಸಿದೆ.

ಕಂಪೆನಿಯ ಜಾಗತಿಕ ತಯಾರಿಕಾ ಕೇಂದ್ರ ರಾಜಸ್ತಾನದಲ್ಲಿರುವ ನೀಮ್ರನದಲ್ಲಿ ಸಹ ಉತ್ಪಾದನೆ ಕಾರ್ಯಾಚರಣೆ ಆರಂಭವಾಗಿದೆ. 40 ದಿನಗಳ ಲಾಕ್ ಡೌನ್ ನಂತರ ಸರ್ಕಾರ ದೇಶಾದ್ಯಂತ ಇಂದು ಭಾಗಶಃ ವಿನಾಯ್ತಿ ನೀಡಿದ್ದರಿಂದ ಕಂಪೆನಿ ತೆರೆಯಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಉತ್ಪಾದನಾ ಘಟಕ ಹರ್ಯಾಣ ಮತ್ತು ಉತ್ತರಾಖಂಡ್ ಗಳಲ್ಲಿ ಇಂದು ಮರು ಆರಂಭಗೊಂಡಿದ್ದು ಇಲ್ಲಿ ಬುಧವಾರದಿಂದ ಉತ್ಪಾದನೆ ಆರಂಭವಾಗಲಿದೆ. ಉತ್ಪಾದನೆ ಆರಂಭವಾದ ಕೆಲವೇ ದಿನಗಳಲ್ಲಿ ವಾಹನ ತಯಾರಾಗಿ ರಸ್ತೆಗಿಳಿಯಲಿದೆ ಎಂದು ಕಂಪೆನಿಯ ಅಧ್ಯಕ್ಷ ಪವನ್ ಮುಂಜಲ್ ತಿಳಿಸಿದ್ದಾರೆ.

SCROLL FOR NEXT