ವಾಣಿಜ್ಯ

ಬ್ಯಾಂಕ್ ಸಾಲಗಳ ಮರುಪಾವತಿಗೆ ಮತ್ತೆ 3 ತಿಂಗಳು ವಿನಾಯಿತಿ ನೀಡಲು ಆರ್‌ಬಿಐ ಚಿಂತನೆ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಬ್ಯಾಂಕ್ ಸಾಲಗಳ ಮರುಪಾವತಿಗೆ ಮತ್ತೆ 3 ತಿಂಗಳು ವಿನಾಯಿತಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಕೊರೋನಾ ಭೀತಿಯಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಹೀಗಾಗಿ ಸಾಮಾನ್ಯ ಜನ ಮತ್ತು ಉದ್ಯಮಗಳ ಹಿತರಕ್ಷಣೆಯ ದೃಷ್ಟಿಯಿಂದ ಬ್ಯಾಂಕ್ ಸಾಲಗಳ ಮೇಲಿನ ಮರುಪಾವತಿಯನ್ನು ಆರ್‌ಬಿಐ ಮತ್ತೆ  ಮೂರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ.

ಈ ಹಿಂದೆ ಸಾಲಗಳ ಮರುಪಾವತಿಯ ಕಾಲವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಭಾರತೀಯ ಬ್ಯಾಂಕುಗಳ ಸಂಘ ಸೇರಿದಂತೆ ವಿವಿಧ ಭಾಗಗಳಿಂದ ಸಲಹೆಗಳು ಬಂದಿದ್ದವು. ಅಲ್ಲದೆ ಲಾಕ್ ಡೌನ್ ಮುಂದುವರೆದಿರುವುದರಿಂದ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳು ತಮ್ಮ ಸಾಲವನ್ನು  ಪೂರೈಸಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿದೆಯಾದರೂ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಪುನಾರಂಭಗೊಂಡಿಲ್ಲ. ಲಾಕ್ ಡೌನ್ ನಿಂದಾಗಿ ಹಲವು ಸಣ್ಣ ಕೈಗಾರಿಕೆಗಳು ನೆಲಕಚ್ಚಿದ್ದು, ಅವುಗಳ ಪುನಸ್ಛತೇನಕ್ಕೆ ಕ್ರಮ  ಕೈಗೊಳ್ಳಬೇಕು. ಇದೇ ಕಾರಣಕ್ಕೆ ಇದೀಗ ಆರ್ ಬಿಐ ಕೂಡ ಬ್ಯಾಂಕ್ ಸಾಲಗಳ ಮರುಪಾವತಿಗೆ ಮತ್ತೆ 3 ತಿಂಗಳು ವಿನಾಯಿತಿ ನೀಡುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಿಗೆ ಕೆಲವು ಸಡಿಲಿಕೆಗಳೊಂದಿಗೆ ಕೇಂದ್ರ ಸರ್ಕಾರವು ಮೇ 17 ರವರೆಗೆ ಲಾಕ್‌ಡೌನ್ ಅವಧಿಯನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಿದೆ.

SCROLL FOR NEXT