ವಾಣಿಜ್ಯ

ಆನ್ ಲೈನ್ ಮಾರಾಟಕ್ಕೆ ಉತ್ತೇಜನ: ಅಗ್ರಿ ಬಜಾರ್ ನಿಂದ ರೈತರ ನೋಂದಣಿ ಶುಲ್ಕ ಮನ್ನಾ

Shilpa D

ಬೆಂಗಳೂರು: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಅಗ್ರಿ ಬಜಾರ್ ಸಂಸ್ಥೆಯು ರೈತರ ನೋಂದಣಿ ಶುಲ್ಕವನ್ನು ಮನ್ನಾ ಮಾಡಿದೆ. ರೈತರು ಅಗ್ರಿಬಜಾರ್ ಆ್ಯಪ್ ಮೂಲಕ ತಮ್ಮ ಬೆಳೆಗಳನ್ನು  ಖರೀದಿದಾರರಿಗೆ ನೇರವಾಗಿ ಮಾರಾಟ ಮಾಡಬಹುದು. ಈಗ ಸಂಸ್ಥೆಯು ರೈತರ ನೋಂದಣಿಯನ್ನು ಉಚಿತ ಮಾಡಿದೆ.

ಸಂಸ್ಥೆಯ ಈ ಪ್ರಸ್ತಾಪಕ್ಕೆ ರೈತ ಸಮುದಾಯದಿಂದ ಉತ್ಸಾಹಭರಿತ ಪ್ರತಿಕ್ರಿಯೆ ಬಂದಿದೆ. ಲಾಕ್‌ಡೌನ್ ನಿರ್ಬಂಧ, ಮಂಡಿ ಮುಚ್ಚುವಿಕೆ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಯಿಂದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಸಣ್ಣ ಕೃಷಿ ಮಾಲೀಕರು ಇದರಿಂದ ಹೆಚ್ಚಿನ ಲಾಭವನ್ನು ಪಡೆದಿದ್ದಾರೆ. ಈ ಲಾಕ್‌ ಡೌನ್ ಸಂದರ್ಭದಲ್ಲಿ ಅಗ್ರಿಬಜಾರ್ ಶೇಕಡ 400 ರಷ್ಟು ಹೆಚ್ಚಿನ ನೋಂದಣಿಯನ್ನು ದಾಖಲಿಸಿದೆ. ಆ್ಯಪ್ ಅಥವಾ ಟೋಲ್ ಫ್ರೀ ದೂರವಾಣಿ ಸಂಖ್ಯೆ ಸಹಾಯದಿಂದ ರೈತರು ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ www.agribazaar.com ಸಂಪರ್ಕಿಸಬಹುದು.

“ಕೋವಿಡ್-19 ಪರಿಣಾಮ ಭಾರತೀಯ ಕೃಷಿ ಅನೇಕ ದೊಡ್ಡ ಸವಾಲುಗಳನ್ನು ಎದುರಿಸಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತದ ಪ್ರಯತ್ನದಿಂದ ಭಾರತೀಯ ರೈತನ ಡಿಜಿಟಲ್ ಪ್ರಯಾಣವು ಅಂತಹ ಕಠಿಣ ಸಮಯದಲ್ಲಿ ಪರಿಹಾರವನ್ನು ತಂದಿದೆ. ಇಂಥ ಸಮಯದಲ್ಲಿ ರೈತರು ನಮ್ಮ ಪ್ಲಾಟ್‌ ಫಾರ್ಮ್‌ ನಲ್ಲಿ ಶುಲ್ಕವಿಲ್ಲದೆ ನೋಂದಾಯಿಸಲು ಅನುವು ಮಾಡಿಕೊಡುವ ಮೂಲಕ ಪ್ರಸ್ತುತ ನಿರ್ಬಂಧಗಳ ಮಧ್ಯೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಹಾಯ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ.
www.agribazaar.com ನಂತಹ ಡಿಜಿಟಲ್ ಪ್ಲಾಟ್‌ ಫಾರ್ಮ್‌ ಗಳಿಗೆ ಸ್ಥಳಾಂತರಗೊಳ್ಳುವುದು ಉತ್ತಮ ವ್ಯವಹಾರಗಳಿಗಾಗಿ ಅಲ್ಲ ಆದರೆ ಒಟ್ಟಾರೆ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ” ಎಂದು ಅಗ್ರಿಬಜಾರ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ಅಗರ್‌ವಾಲ್ ಹೇಳಿದರು.

SCROLL FOR NEXT