ವಾಣಿಜ್ಯ

ಲಾಕ್‌ಡೌನ್ ಕೊನೆಗೊಳ್ಳಬೇಕಿದೆ: ಕಿರಣ್ ಮುಜುಮ್‌ದಾರ್ ಶಾ

Lingaraj Badiger

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ನಾಲ್ಕು ಹಂತಗಳಲ್ಲಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಕೊನೆಗೊಳ್ಳಬೇಕಾಗಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಮ್‌ದಾರ್ ಶಾ ಅವರು ಹೇಳಿದ್ದಾರೆ.

ಲಾಕ್ ಡೌನ್ ಅಂತ್ಯಗೊಳ್ಳಬೇಕಿದೆ. ನಮಗೆ ಈಗ ಬೇಕಾಗಿರುವುದು ಸೋಂಕಿತ ವ್ಯಕ್ತಿಯನ್ನು ತ್ವರಿತವಾಗಿ ಪತ್ತೆ ಹಚ್ಚಿ, ವೈರಸ್ ಹರಡುವುದನ್ನು ನಿಯಂತ್ರಿಸುವ ತಂತ್ರಗಾರಿಕೆ ಎಂದು ಶಾ ತಿಳಿಸಿದ್ದಾರೆ.

ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಹಿಂದಿರುಗಿಸಿರುವುದರಿಂದ ಕೊವಿಡ್- ಪ್ರೇರಿತ ಲಾಕ್‌ಡೌನ್ ಅನ್ನು ಮುಂದೆ ವಿಸ್ತರಿಸಲು ಯಾವುದೇ ಸಂದರ್ಭವಿಲ್ಲ ಎಂದು ಕಿರಣ್ ಮಜುಮ್ದಾರ್ ಶಾ ಹೇಳಿದ್ದಾರೆ.

ವಲಸೆ ಕಾರ್ಮಿಕರ ಅವರ ರಾಜ್ಯಗಳಿಗೆ ಕಳುಹಿಸಿರುವುದರಿಂದ ಈಗ ಲಾಕ್‌ಡೌನ್ ಅನ್ನು ವಿಸ್ತರಿಸುವಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಯಾವುದೇ ನಿಯಂತ್ರಣಗಳಿಲ್ಲದೆ ದೇಶದ ವಿವಿಧ ಭಾಗಗಳಿಗೆ ಹೋಗಿದ್ದಾರೆ. ಆದ್ದರಿಂದ, ಈಗ ಲಾಕ್‌ಡೌನ್ ಅನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ. ಈಗ ವೈರಸ್ ಅನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುವ ಪ್ರಶ್ನೆಎದುರಾಗಿದೆ ಎಂದು ಅವರು ಹೇಳಿದರು.

SCROLL FOR NEXT