ವಾಣಿಜ್ಯ

8 ತಿಂಗಳ ಬಳಿಕ ದೇಶದಲ್ಲಿ ಡೀಸೆಲ್ ಮಾರಾಟ ಹೆಚ್ಚಳ

Lingaraj Badiger

ನವದೆಹಲಿ: ವರ್ಷದ ಫೆಬ್ರವರಿಯ ನಂತರ 8 ತಿಂಗಳ ಬಳಿಕ ಇದೇ ಮೊದಲ ಬಾರಿಗೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಡೀಸೆಲ್ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತೈಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ತೈಲ ಡೀಸೆಲ್ ಗೆ ಹಬ್ಬದ ಸೀಸನ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಭಾರತದ ಟಾಪ್ ಮೂರು ತೈಲ ರೀಟೇಲರ್ ಗಳ ಬಳಿ ಕಳೆದ ವರ್ಷದ ಅಕ್ಟೋಬರ್ ಗೆ ಹೋಲಿಸಿದಲ್ಲಿ ಶೇಕಡ 6.1% ಮಾರಾಟ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಈ ವರ್ಷದ ಮಾರ್ಚ್ ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೇರಿದ್ದ ನಿರ್ಬಂಧದಿಂದಾಗಿ ತೈಲ ಬೇಡಿಕೆ ಕುಸಿದುಹೋಗಿತ್ತು. ಭಾರತದ ಅತಿ ದೊಡ್ಡ ತೈಲ ಸಂಸ್ಕರಣಾ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಒಟ್ಟು ಸಾಮರ್ಥ್ಯದ 93ರಷ್ಟು ಉತ್ಪಾದಿಸುತ್ತಿದೆ. ಶೀಘ್ರವೇ ಶೇ 100ರಷ್ಟು ಉತ್ಪಾದನೆ ಮಾಡಲಿದ್ದು ಅಕ್ಟೋಬರ್ ಮಧ್ಯ ಭಾಗದಿಂದ ಶುರುವಾಗಿ ಒಂದು ತಿಂಗಳಿಗೂ ಹೆಚ್ಚು ಸಮಯ ಇದು ಮುಂದುವರಿಯಲಿದೆ ಎಂದು ಮೂಲಗಳು ಹೇಳಿವೆ.

SCROLL FOR NEXT