ಭಾರತದ ಮಾರುಕಟ್ಟೆಗೆ ಪಬ್ ಜಿ ಕಮ್ ಬ್ಯಾಕ್: ದೇಶದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆಗೆ ಚಿಂತನೆ
ದೀಪಾವಳಿಯೊಂದಿಗೆ ಮೊಬೈಲ್ ಗೇಮ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಲು ಭಾರತದಲ್ಲಿ ಅಂಗಸಂಸ್ಥೆ ರಚನೆ ಹಾಗೂ ಹೊಸ ಗೇಮ್ ನೊಂದಿಗೆ ಭಾರತದ ಮಾರುಕಟ್ಟೆಗೆ ಕಮ್ ಬ್ಯಾಕ್ ಆಗುವುದಾಗಿ ಪಬ್ ಜಿ ಕಾರ್ಪೋರೇಷನ್ ಹೇಳಿದೆ.
ನವದಹೆಲಿ: ದೀಪಾವಳಿಯೊಂದಿಗೆ ಮೊಬೈಲ್ ಗೇಮ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಲು ಭಾರತದಲ್ಲಿ ಅಂಗಸಂಸ್ಥೆ ರಚನೆ ಹಾಗೂ ಹೊಸ ಗೇಮ್ ನೊಂದಿಗೆ ಭಾರತದ ಮಾರುಕಟ್ಟೆಗೆ ಕಮ್ ಬ್ಯಾಕ್ ಆಗುವುದಾಗಿ ಪಬ್ ಜಿ ಕಾರ್ಪೋರೇಷನ್ ಹೇಳಿದೆ.
ಇ- ಸ್ಪೂರ್ಟ್ಸ್, ಸ್ಥಳೀಯ ವಿಡಿಯೋ ಗೇಮ್, ಮನೋರಂಜನೆ ಮತ್ತು ಐಟಿ ಇಂಡಸ್ಟ್ರಿ ಉತ್ತೇಜನಕ್ಕಾಗಿ ಭಾರತದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿರುವುದಾಗಿ ಕಂಪನಿ ತಿಳಿಸಿದೆ.
ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಪಜ್ ಜಿ ಮೊಬೈಲ್ ಆ್ಯಪ್ ಸೇರಿದಂತೆ 118 ಚೀನಾದ ಕಂಪನಿಗಳನ್ನು ಭಾರತ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾನ್ ಮಾಡಿತ್ತು. ನಿಷೇಧವನ್ನು ತೆಗೆದುಹಾಕಲು, ಭಾರತದಲ್ಲಿನ ಚೀನಾ ಮೂಲದ ಟೆನ್ಸೆಂಟ್ ಗೇಮ್ಸ್ ಗೆ ಇನ್ನೂ ಮುಂದೆ ಫ್ರಾಂಚೈಸಿಯನ್ನು ಅಧಿಕೃತಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಪಬ್ ಜಿ ಹೇಳಿದೆ.
ಭಾರತದ ಮಾರುಕಟ್ಟೆಗಾಗಿ ವಿಶೇಷವಾಗಿ ಹೊಸ ಗೇಮ್ ಸೃಷ್ಟಿಯೊಂದಿಗೆ ಪಬ್ ಜಿ ಮೊಬೈಲ್ ಭಾರತ ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ.
ಭಾರತೀಯ ಅಂಗಸಂಸ್ಥೆಯು ವ್ಯಾಪಾರ, ಇ- ಸ್ಪೋರ್ಟ್ಸ್, ಮತ್ತು ಗೇಮ್ ಅಭಿವೃದ್ಧಿಗಾಗಿ 100 ನೌಕರರನ್ನು ನೇಮಿಸಿಕೊಳ್ಳಲಿದೆ ಎಂದು ಪಬ್ ಜಿ ಕಾರ್ಪೋರೇಷನ್ ತಿಳಿಸಿದೆ. ಆದಾಗ್ಯೂ, ಪಬ್ ಜಿ ಮೊಬೈಲ್ ಇಂಡಿಯಾ ಉದ್ಘಾಟನೆಯ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.