ವಾಣಿಜ್ಯ

ಭಾರತದಲ್ಲಿ ಈ ಎರಡು ದಿನ ನೆಟ್‌ಫ್ಲಿಕ್ಸ್ ನಿಂದ ಉಚಿತ ಸ್ಟ್ರೀಮಿಂಗ್ ಸೇವೆ!

Raghavendra Adiga

ನವದೆಹಲಿ: ಆನ್ ಲೈನ್ ಸ್ಟ್ರೀಮಿಂಗ್ ದೈತ್ಯ ಕಂಪನಿಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್ ಭಾರತದಲ್ಲಿನ ತನ್ನ ಗ್ರಾಹಕರಿಗೆ ಡಿಸೆಂಬರ್ 5-6ರ ವಾರಾಂತ್ಯದಂದು ತನ್ನ ವೇದಿಕೆಯನ್ನು ಮುಕ್ತಗೊಳಿಸುವುದಾಗಿ ಶುಕ್ರವಾರ ಪ್ರಕಟಿಸಿದೆ.

ಡಿಸೆಂಬರ್ 5 ರಂದು ಮಧ್ಯರಾತ್ರಿ 12 ರಿಂದ ಭಾರತದಲ್ಲಿ ಯಾರಾದರೂ ಯಾವ ಸಬ್ಕ್ರಿಪ್ಷನ್ ಇಲ್ಲದೆಯೂ ಬ್ಲಾಕ್‌ಬಸ್ಟರ್ ಚಲನಚಿತ್ರಗಳು, ಅತಿದೊಡ್ಡ ವೆಬ್ ಸರಣಿಗಳು, ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳು ಮತ್ತು ರಿಯಾಲಿಟಿ ಶೋಗಳನ್ನು ವೀಕ್ಷಿಸಬಹುದಾಗಿದೆ.

ಕಳೆದ ತಿಂಗಳು, ಒಟಿಟಿ ಸ್ಟ್ರೀಮಿಂಗ್ ಕಂಪನಿ ಭಾರತದ ತನ್ನ ಬಳಕೆದಾರರಿಗೆ ವಾರಾಂತ್ಯದಲ್ಲಿ ಉಚಿತ ಸ್ಟ್ರೀಮಿಂಗ್‌ಗೆ ಪ್ರವೇಶ ಕಲ್ಪಿಸುವ ಬಗ್ಗೆ ಯೋಜನೆಯನ್ನು ಪ್ರಕಟಿಸಿತು.

"ದೇಶದ ಪ್ರತಿಯೊಬ್ಬರೂ ವಾರಾಂತ್ಯದಲ್ಲಿ ನೆಟ್‌ಫ್ಲಿಕ್ಸ್‌ಗೆ ಪ್ರವೇಶವನ್ನು ಉಚಿತವಾಗಿ ಪಡೆಯಬಹುದಾಗಿದೆ. ನಮ್ಮಲ್ಲಿರುವ ಅದ್ಭುತ ಕಥೆಗಳು, ನಮ್ಮ ಸೇವೆ ಹಾಗೂ ಅದರ ಕಾರ್ಯಾಚರಣೆ ವಿಧಾನ ತಿಳಿಯಲು ಹೊಸ ಜನರ ಗುಂಪನ್ನು ಕಟ್ಟಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದು ನಾವು ಭಾವಿಸುತ್ತೇವೆ" ನೆಟ್‌ಫ್ಲಿಕ್ಸ್‌ , ಸಿಒಒ ಮತ್ತು ಚೀಫ್ ಪ್ರ್‍ಆಡಕ್ಟ್ ಆಫೀಸರ್ಗ್ರೆಗ್ ಪೀಟರ್ಸ್ ಹೇಳಿದ್ದಾರೆ.

"ನೆಟ್‌ಫ್ಲಿಕ್ಸ್‌ನಲ್ಲಿ, ಪ್ರಪಂಚದಾದ್ಯಂತದ ಅತ್ಯಂತ ಅದ್ಭುತವಾದ ಕಥೆಗಳನ್ನು ಭಾರತದ ಎಲ್ಲ ಮನರಂಜನಾ ಅಭಿಮಾನಿಗಳು ನೋಡುವಂತಾಗಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ನಾವು ಸ್ಟ್ರೀಮ್‌ಫೆಸ್ಟ್-ಉಚಿತ ನೆಟ್‌ಫ್ಲಿಕ್ಸ್‌ನ  ವೀಕೆಂಡ್ ಆಯೋಜಿಸುತ್ತಿದ್ದೇವೆ." ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಸೇವೆ ಬಳಸಲು netflix.com/StreamFestಗೆ ಭೇಟಿ ನೀಡಿ, ನಿಮ್ಮ ಹೆಸರು, ಇಮೇಲ್ ಅಥವಾ ಫೋನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಸೈನ್ ಅಪ್ ಮಾಡಬೇಕು. ಆ ನಂತರ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ.ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಾವತಿ ಅಗತ್ಯವಿರುವುದಿಲ್ಲ.

"ಸ್ಟ್ರೀಮ್‌ಫೆಸ್ಟ್ ಸಮಯದಲ್ಲಿ ಸೈನ್ ಇನ್ ಮಾಡುವ ಯಾರಾದರೂ ಸ್ಟಾಂಡರ್ಡ್ ಡೆಫಿನಿಷನ್ ನಲ್ಲಿ ಒಂದು ಸ್ಟ್ರೀಮ್ ಅನ್ನು ಪಡೆಯುತ್ತಾರೆ. ಆದುದರಿಂದ ಬೇರೆ ಯಾರೂ ಒಂದೇ ಲಾಗಿನ್ ನಲ್ಲಿ ಸ್ಟ್ರೀಮ್ ಮಾಡಲು ಸಾಧ್ಯವಿಲ್ಲ. " ಎಂದು ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ವೈಸ್ ಪ್ರೆಸಿಡೆಂಟ್ ಮೋನಿಕಾ ಶೆರ್ಗಿಲ್ ಹೇಳಿದರು.
 

SCROLL FOR NEXT