ವಾಣಿಜ್ಯ

ಸತತ 13ನೇ ವರ್ಷವೂ ಫೋರ್ಬ್ಸ್ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಮುಖೇಶ್ ಅಂಬಾನಿ

Nagaraja AB

ನವದೆಹಲಿ: ಸತತ 13ನೇ ವರ್ಷವೂ ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ  ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ ಹಿಂದಿನ ವರ್ಷಕ್ಕಿಂತ ಶೇ. 14ರಷ್ಟು ಏರಿಕೆಯಾಗಿದ್ದು, 517. 5 ಬಿಲಿಯನ್ ಡಾಲರ್ ಗೆ ತಲುಪಿಸಿದೆ.ಈ ವರ್ಷ ಅವರು ತಮ್ಮ ಆಸ್ತಿಗೆ  37.3 ಬಿಲಿಯನ್ ಹೆಚ್ಚುವರಿ ಸೇರಿಸಿದ್ದಾರೆ.ಈ ಮೂಲಕ ಅವರ ಒಟ್ಟು ಮೌಲ್ಯ ಶೇ. 73 ರಷ್ಟು ಏರಿಕೆಯಾಗಿದೆ ಎಂದು ಫೋರ್ಬ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತಿನಲ್ಲೂ ಗಣನೀಯ ಹೆಚ್ಚಳವಾಗಿದೆ. ಅದಾನಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು  25.2 ಬಿಲಿಯನ್ ಡಾಲರ್ ಗೆ ಹೆಚ್ಚಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಜುಲೈನಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಅಧ್ಯಕ್ಷ ಹುದ್ದೆಯನ್ನು ತಮ್ಮ ಮಗಳು ರೋಶ್ನಿ ನಾಡರ್ ಮಲ್ಹೋತ್ರಾ ಅವರಿಗೆ ವಹಿಸಿದ್ದ ಟೆಕ್ ಉದ್ಯಮಿ ಶಿವ ನಾಡರ್,  20.4 ಬಿಲಿಯನ್ ಒಟ್ಟಾರೇ ಆಸ್ತಿ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಅವಿನ್ಯೂ ಸೂಪರ್ ಮಾರ್ಟ್ಸ್ ನ ರಾಧಾಕೃಷ್ಣನ್ ದಾಮಾನಿ 15.4 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಹಿಂದೂಜಾ ಸಹೋದರರು 12. 8 ಬಿಲಿಯನ್ ಡಾಲರ್ ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಸೈಕ್ರಸ್ ಪೂನಾವಾಲಾ 11. 5 ಬಿಲಿಯನ್ ಡಾಲರ್ ನೊಂದಿಗೆ ನಂಬರ್ 6, ಪಾಲೊಂಜಿ ಮಿಸ್ತ್ರೀ, ಉದಯ್ ಕೊಟಕು, ಗೋದ್ರೆಜ್ ಕುಟುಂಬ ಮತ್ತು ಲಕ್ಷ್ಮಿ ಮಿತ್ತಲ್ ಕ್ರಮವಾಗಿ 7,8,9 ಮತ್ತು 10ನೇ ಸ್ಥಾನದಲ್ಲಿದ್ದಾರೆ.

SCROLL FOR NEXT