ವಾಣಿಜ್ಯ

ಜಿಯೋದಿಂದ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಉಚಿತ ಕ್ರೆಡಿಟ್ ಕ್ಯಾರಿ ಫಾರ್ವರ್ಡ್ ಕೊಡುಗೆ

Srinivas Rao BV

ಮುಂಬೈ: ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ರಿಲಯನ್ಸ್ ಜಿಯೋ, ಈಗ ಹೊಸದಾಗಿ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆಗಳಲ್ಲಿಯೂ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆಗಳಿಗೆ ಸೇರುವ ಇತರ ಆಪರೇಟರ್ ಗಳ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಟೆಲಿಕಾಂ ವಲಯದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣವಾಗಿ ಶೂನ್ಯ ವೆಚ್ಚದಲ್ಲಿ ಮತ್ತು ಯಾವುದೇ ಭದ್ರತಾ ಠೇವಣಿ (ಸೆಕ್ಯೂರಿಟಿ ಡೆಪಾಸಿಟ್) ಇಲ್ಲದೇ ಕ್ರೆಡಿಟ್ ಮಿತಿಯನ್ನು ‘ಕ್ಯಾರಿ ಫಾರ್ವರ್ಡ್’ ಮಾಡಬಹುದಾದ ಆಯ್ಕೆಯನ್ನು ನೀಡಿದೆ.

ಇತರ ಆಪರೇಟರ್ ಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಬಳಕೆದಾರರಿಗೆ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್‌ಗೆ ಸೇರಲು ಸುಲಭವಾಗುವಂತೆ ಜಿಯೋ ಈ 'ಕ್ಯಾರಿ-ಫಾರ್ವರ್ಡ್ ಯುವರ್ ಕ್ರೆಡಿಟ್ ಲಿಮಿಟ್' ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.

SCROLL FOR NEXT