ವಾಣಿಜ್ಯ

ಸೆಪ್ಟೆಂಬರ್ ನಲ್ಲಿ ದೇಶದಲ್ಲಿ ಪ್ರಯಾಣಿಕರ ವಾಹನ ಮಾರಾಟ ಶೇ.26ರಷ್ಟು ಹೆಚ್ಚಳ: ಸಿಯಾಮ್

Sumana Upadhyaya

ನವದೆಹಲಿ: ದೇಶದಲ್ಲಿ ಪ್ರಯಾಣಿಕರ ವಾಹನದ ಸಗಟು ಮಾರಾಟ ಶೇಕಡಾ 26.45ರಷ್ಟು ಹೆಚ್ಚಿದ್ದು ಕಳೆದ ತಿಂಗಳು ಸೆಪ್ಟೆಂಬರ್ ನಲ್ಲಿ 2 ಲಕ್ಷದ 72 ಸಾವಿರದ 027 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ 2 ಲಕ್ಷದ 15 ಸಾವಿರದ 124 ವಾಹನಗಳು ಮಾರಾಟವಾಗಿವೆ ಎಂದು ವಾಹನಗಳ ಉತ್ಪಾದನೆ ಕೈಗಾರಿಕಾ ಘಟಕ ಸಿಯಾಮ್ ತಿಳಿಸಿದೆ.

ಇತ್ತೀಚಿನ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಸಿಯಾಮ್)ಸೊಸೈಟಿಯ ಅಂಕಿಅಂಶ ಪ್ರಕಾರ, ದ್ವಿಚಕ್ರ ವಾಹನಗಳ ಮಾರಾಟ ಕೂಡ ಇತ್ತೀಚೆಗೆ ಹೆಚ್ಚಾಗಿದ್ದು ಶೇಕಡಾ 11.64ರಷ್ಟಾಗಿದೆ. 18 ಲಕ್ಷದ 49 ಸಾವಿರದ 546 ಘಟಕಗಳು ಮಾರಾಟವಾಗಿದ್ದು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 16 ಲಕ್ಷದ 56 ಸಾವಿರದ 658 ಘಟಕಗಳು ಮಾರಾಟವಾಗಿದ್ದವು.

ಬೈಕ್ ಗಳ ಮಾರಾಟವು 12,24,117 ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 10,43,621 ಮಾರಾಟವಾಗಿದ್ದು, ಇದು ಈ ವರ್ಷ ಶೇಕಡಾ 17.3 ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 5,55,754 ಯುನಿಟ್‌ಗಳಿಂದ ಸ್ಕೂಟರ್ ಮಾರಾಟವು 5,56,205 ಕ್ಕೆ ಏರಿಕೆಯಾಗಿದೆ. ಜುಲೈ-ಸೆಪ್ಟೆಂಬರ್ 2020 ತ್ರೈಮಾಸಿಕದಲ್ಲಿ, ಪ್ರಯಾಣಿಕರ ವಾಹನಗಳ ಮಾರಾಟವು ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 6,20,620 ಯುನಿಟ್‌ಗಳಿಂದ ಶೇ 17.02 ರಷ್ಟು ಏರಿಕೆ ಕಂಡು 7,26,232 ಕ್ಕೆ ತಲುಪಿದೆ.

ಸೆಪ್ಟೆಂಬರ್ ವರೆಗಿನ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರಾಟವು 46,90,565 ಕ್ಕೆ ಏರಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ 46,82,571 ಯುನಿಟ್ ಮಾರಾಟವಾಗಿದೆ. ಆದಾಗ್ಯೂ, ವಾಣಿಜ್ಯ ವಾಹನಗಳ ಮಾರಾಟವು ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಶೇಕಡಾ 20.13 ರಷ್ಟು ಕುಸಿದು 1,33,524 ಕ್ಕೆ ತಲುಪಿದೆ.

ಎರಡನೇ ತ್ರೈಮಾಸಿಕದಲ್ಲಿ ವಿಭಾಗಗಳಾದ್ಯಂತ ವಾಹನಗಳ ಮಾರಾಟವು 55,96,223 ಕ್ಕೆ ಇಳಿದಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 56,51,459 ಯುನಿಟ್‌ಗಳಷ್ಟಿತ್ತು.

SCROLL FOR NEXT